||ಹನುಮ ಸ್ತುತಿ ||
ಬಾಲ ಹನುಮ ಬರಲಿಲ್ಲವಮ್ಮ
ಚಿಕ್ಕ ಬಾಲ ಹನುಮನಿಗೆ ಏನಾಯಿತಮ್ಮ ||
ಶಂಕೆಯಿಲ್ಲದೆ ಲಂಕೆಗೆ ಹಾರಿ
ಜಂಪಿಸಿ ಕೈಕಾಲು ನೊಂದಿದ್ದಾವೇನ
ಆಕಾಶದ ಗಾಳಿ ಸಾಗಿ ಸೋಕಿತೇನ
ಸಾಕು ತಿರುಗಲಾರೆನೆಂದು ಕುಳಿತಿದ್ದಾನೇನ ||೧||
ಹಸಿದು ಬಂದ ಮುದ್ರಿಕೆ ತಂದ
ಹಸುಮಕ್ಕಳೂಟಕ್ಕೆ ಬರಲಿಲ್ಲವಮ್ಮ
ಅಸುರರ ವನಕ್ಕೋಗಿ ಹಣ್ಣು ಮೆಲ್ಲೆಂದರೆ
ಅಸುರರ ಕಂಡು ತಾ ಅಂಜಿದ್ದಾನೇನ ||೨||
ಆಕಾಶಮಾರ್ಗದಿ ರಾಮರ ನುಡಿ ಕೇಳಿ
ಭರದಿಂದಲಿ ಲಂಕಾಪುರನೇರಿದ
ಶ್ರೀರಾಮ ರಾವಣ ಕೊಂದ ವಿಭೀಷಣ ಗೆದ್ದ
ಪುರಂದರ ವಿಠಲ ತಾ ಮೆಚ್ಚಿದ್ದಾನೇನ ||೩||
0 ಕಾಮೆಂಟ್‌ಗಳು