||ಹರಿ ಸ್ತುತಿ ||
ಕೂಗಿದರು ಧ್ವನಿ ಕೇಳದೆ
ಶಿರಬಾಗಿದರು ದಯ ಬಾರದೆ
||ಕೂಗಿದರು||
ಭೋಗಿಶಯನ ಭುವನಾಧಿಪತೇ||2||
ನಿನ್ನ ಆಗಮನವೆಂದಿಗೇ..ಏ..
ಆಗುವುದೋ ಪ್ರಭೂ
||ಕೂಗಿದರು||
ಸಿಂಧುಶಯನ ಶೇಷಾದ್ರಿವರ
ಸಿರಿಮಂದಿರ ಭಕ್ತ ಕುಟುಂಬಧರಾ
||ಸಿಂಧು||
ಸುಂದರಮೂರುತಿ ಒಂದಿನ ಸ್ವಪ್ನದಿ||2||
ಬಂದು ಪದದ್ವಯ ಚೆಂದದಿ ತೋರಿಸೊ||2||
||ಕೂಗಿದರು||
ಕರುಣಾಶರಧಿಯು ನೀನಲ್ಲವೆ
ಕ್ರಷ್ಣಾ ಶರಣಾಗತರಿಗೆ ದೊರೆಯಲ್ಲವೆ
||ಕರುಣಾ||
ಮೊರೆಹೊಕ್ಕವರಿಗೆ ಮರೆಯಾಗುವರೆ||2||
ಸರಿಯೇ ಜಗದೊಳು
ವಿಜಯವಿಠ್ಠಲರೇಯ||ಸರಿಯೇ||
||ಕೂಗಿದರು||
0 ಕಾಮೆಂಟ್‌ಗಳು