|| ಹರಿ ಸ್ತುತಿ ||
ಭಕುತಿ ಸುಖವೊ ರಂಗ
ಮುಕುತಿ ಸುಖವೊ|
ಭಕುತಿ ಸುಖವೊ ಮುಕುತಿ ಸುಖವೊ
ಯುಕುತಿವಂತರೆಲ್ಲ ಹೇಳಿ||
ಭಕುತಿ ಮಾಡಿದ ಪ್ರಹ್ಲಾದ
ಮುಕುತಿಯನ್ನು ಪಡೆದುಕೊಂಡ|
ಮುಕುತಿ ಬೇಡಿದ ಧ್ರುವರಾಯ
ಯುಕುತಿಯಿಂದ ಹರಿಯ ಕಂಡ|
ಭಕುತಿ ಮಾಡಿದ ಅಜಮಿಳನು
ಅಂತ್ಯದಲಿ ಹರಿಯ ಕಂಡ |
ಮುಕುತಿ ಬೇಡಿದ ಕರಿರಾಜ
ದುರಿತಗಳನು ಕಳೆದುಕೊಂಡ||
ಭಕುತಿ ಮುಕುತಿದಾತ ನಮ್ಮ
ಲಕುಮಿಯ ಅರಸ ವಿಜಯವಿಠ್ಠಲ |
ಶಕುತನೆಂದು ತಿಳಿದು ನಿತ್ಯ
ಭಕುತಿಯಿಂದ ಭಜನೆ ಮಾಡಿರೊ||
0 ಕಾಮೆಂಟ್‌ಗಳು