ದೇವಾ ಹನುಮ ಶೆಟ್ಟಿ - Deva Hanuma Shetty

|| ಹನುಮ ಸ್ತುತಿಃ ||




ದೇವಾ ಹನುಮ ಶೆಟ್ಟಿ|ರಾಯಾ ಜಗಜಟ್ಟಿ |

ಕಾವೋದು ಭಾವಿ ಪರಮೇಷ್ಠಿ ||ಪ||

ಪಾವನ ಚರಿತ ಸಂಜೀವನ ಗಿರಿಧರ |

ಪಾವಮಾನಿ ಕರುಣಾವ-

ಲೋಕನದಿ|ನೀ ಒಲಿಯುತ ಸದಾವಕಾಲ ತವ |

ತಾವರೆ ಪದಯುಗ ಸೇವೆಯ ಕರುಣಿಸೋ||ಅ.ಪ||


ವಾನರ ಕುಲನಾಯಕ|ಜಾನಕಿಶೋಕ ಕಾನನ ತೃಣಪಾವಕ| ಹೀನ

ಕೌರವ ನಾಶಕ ಸನ್ಮನಿ ತಿಲಕ|ಆನಂದತೀರ್ಥ ನಾಮಕ ||

ಕೋಣಿಯೊಳಗೆ ಎಣೆಗಾಣೆ ನಿನಗೆ ಎನ್ನ |

ಮಾಣದ ಅನುದಿನ ಪಾಣಿ ಪಿಡಿದು ಪೊರೆ |

ಸ್ಥಾಣುಜನಕ ಗೀರ್ವಾಣ ವಿನುತ ಜಗತ್ಪ್ರಾಣ

ರಮಣ ಕಲ್ಯಾಣ ಮೂರುತಿ ||೧||



ಮರುತ ನಂದನ ಹನುಮ|ಪುರಹರರೋಮ|ಪರಮ ಪುರುಷ

ಶ್ರೀಭೀಮಾ|ಕರುಣಾಸಾಗರ ಜಿತಕಾಮ|ಸದ್ಗುಣ ಭೌಮ|

ಪರವಾದಿ ಮತವ ನಿರ್ನಾಮ|ಗಿರಿಸುತ ಪಾಲಕ ಜರಿಜ ವಿನಾಶಕ

ಹರಿಮತ ಸ್ಥಾಪಕ ದುರಿತ ವಿಮೋಚಕ|ಶರಣ ಜನರ ಸುರತರು

ಭಾರತಿವರ ಮರೆಯದೆ ಪಾಲಿಸೋ ನಿರುಪಮ ಚರಿತ||೨||



ದಿಟ್ಟ ಶ್ರೀ ಶ್ಯಾಮಸುಂದರ ವಿಠಲ ಕುವರ ದುಷ್ಟ ರಾವಣ ಮದಹರಾ|

ಜಿಡ್ಡು ಪೂರ್ವಜ ವೃಕೋದರ|ರಣರಂಗ ಶೂರ|ಶಿಷ್ಟ ಜನರ

ಉದ್ಧಾರ|ನಿಷ್ಠೆಯಿಂದ ಮನಮುಟ್ಟಿ ನಿನ್ನ ಪದ|ಥಟ್ಟನೆ ಪಾಡುವ

ಶ್ರೇಷ್ಠ ಸುಜನರೊಳು|ಇಟ್ಟು ಸಲಹೋ ಸದಾ ಸೃಷ್ಟಿಮಂಡಲದಿ|

ಪುಟ್ಟ ಗ್ರಾಮ ಬಲ್ಲಟಿಗಿ ವಾಸಾ || ೩ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು