|| ಹನುಮ ಸ್ತುತಿ ||
ಮುಖ್ಯಪ್ರಾಣ ಮೂಲ ಮೂಲ ಗುರುವೆ ||ಪ||
ರಕ್ಕಸಾಂತಕ ಶ್ರೀ ರಾಮನ ನಿಜ ದಾಸ ||ಅ.ಪ||
ತಂದೆ ನೀನೆ ಎನಗೆ ತಾಯಿ ನೀನೇ ಎನಗೆ
ಬಂಧು ನೀನೇ ಎನಗೆ ಬಳಗವು ನೀನೇ
ಎಂದೆಂದಿಗು ನಮ್ಮೆಲರ ರಕ್ಷಿಪನು ನೀನೇ ||
ತಾತ ನೀನೇ ಎನಗೆ ಕರ್ತ ನೀನೇ ಎನಗೆ
ವಿತ್ತ ನೀನೇ ಎನಗೆ ವಿಭವ ನೀನೇ
ಸತ್ಯ ನೀನೇ ಸದಾಚಾರವು ನೀನೇ||
ಸುಖವು ನೀನೇ ಎನಗೆ ಸುಲಭವು ನೀನೇ ಎನಗೆ
ಏಕಾಂತ ಶ್ರೀ ಪುರಂದರ ವಿಠಲನ
ಭಕುತ ನಿಜದಾಸ ನೀನೇ||
0 ಕಾಮೆಂಟ್‌ಗಳು