ಕೊಡುವ ಕರ್ತೃ ಬೇರೆ ಇರುತಿರೆ - Koduva Karthru Bere Iruthire

 || ಗೋವಿಂದ ಸ್ತುತಿ ||






ಕೊಡುವ ಕರ್ತೃ ಬೇರೆ ಇರುತಿರೆ

ಬಿಡು ಬಿಡು ಚಿಂತೆಯನು || 


ಒಡೆಯನಾಗಿ ಮೂರ್ಜಗವನು ಪಾಲಿಪ|

ಬಡವರುದ್ಧಾರಕ ಭಕ್ತರೊಡೆಯ ಹರಿ || 


ಕಲ್ಲಿನೊಳಗೆ ಇರುವ ಕಪ್ಪೆಗೆ

ಅಲ್ಲಿ ಉದಕ ಕೊಡುವ|

ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ|

ವಲ್ಲಭ ಶ್ರೀಹರಿ ಎಲ್ಲೆಲ್ಲಿರುತಿರೆ || ೧ ||


ಆನೆಗೈದು ಮಣದ ಆಹಾರವ

ತಾನೆ ತಂದು ಕೊಡುವ|

ದೀನರೊಡೆಯ ಶ್ರೀನಿವಾಸ ದಯಾನಿಧಿ|

ಮಾನದಿಂದಲಿ ಕಾಯ್ವ ಭಾನುಕೋಟಿತೇಜ || ೨ ||


ಸರಸಿಜಾಕ್ಷ ತನ್ನ ಸೇರಿದ

ಜನರನ್ನು ಬಿಡನು ಘನ್ನ|

ಪರಮದಯಾನಿಧಿ ಭಕುತರ ಸಲಹುವ|

ಪುರಂದರವಿಠಲ ಪುಷ್ಪಶರನ ಪಿತ || ೩ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು