ರಾಮ ರಾಮ ರಾಮ ಎಂಬ ನಾಮವನ್ನೆ - Rama Rama Emba Namavanne

|| ಶ್ರೀರಾಮ ಸ್ತುತಿ ||



ರಾಮ ರಾಮ ರಾಮ ಎಂಬ ನಾಮವನ್ನೆ ಜಪಿಸಿರಿ |

ನಾಮಕ್ಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ||


ಹಿಂದೆ ಅಜಾಮಿಳ| ಕಂದ ಪ್ರಹ್ಲಾದನು |

ನಾರಿ ಶಿರೋಮಣಿ | ದ್ರೌಪದಿ ದೇವಿಯೋ ||

ಭಕ್ತಿಭಾವದಿಂದ ನಂಬಿ ಭಜಿಸಿ ಕೊಂಡಾಡಲು |

ಮುಕ್ತರಾಗಿ ಹೋದರೈ | ಭಕ್ತಿ ಪಥವ ತೋರಿದರೈ ||

ರಾಮ ರಾಮ ||


ಚೈತನ್ಯ ಮೀರಾ | ಕನಕ ಕಬೀರ |

ಶ್ರೀ ರಾಮದಾಸ | ಶ್ರೀ ತುಕರಾಮ |

ರಾಮ ಕೃಷ್ಣ ಹರಿ ವಿಠ್ಠಲ ಎಂದು ಕೊಂಡಾಡುತ |

ಘೋರ ಸಂಸಾರ ತಾಪ | ಮೀರಿ ಸುಖಿಯಾದರೈ ||

ರಾಮ ರಾಮ ||


ಯಮುನಾ ಗಂಗಾ ತೀರ | ಗೋದಾವರಿ ವಾಸಿ |

ಶ್ರೀ ಬ್ರಹ್ಮ ಚೈತನ್ಯ ಸದ್ಗುರು ನಾಥನೋ||

ಶ್ರೀ ಬ್ರಹ್ಮ ಚೈತನ್ಯ ಶ್ರೀ ಗುರುನಾಥನೋ |

ಬೋಧಿಸಿದ ಬೊದವೋ | ದಾಸ ಬೋದ ಸಾರವೋ

ಇದೇ ನಮ್ಮ ವೇದವೋ ಇದಕ್ಕಿಲ್ಲ ಬೇಧವೋ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು