ಮಾತು ಮಾತಿಗೆ ಕೇಶವ ನಾರಾಯಣ - Maathu Maathige Keshava Narayana

|| ನಾರಾಯಣ ಸ್ತುತಿ ||




ಮಾತು ಮಾತಿಗೆ ಕೇಶವ ನಾರಾಯಣ

ಮಾಧವ ಎನಬಾರದೆ - ಹೇ ಜಿಹ್ವೆ ||ಪಲ್ಲವಿ||


ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದು

ಪ್ರೀತಿಲಿ ನೆನೆದು ಸದ್ಗತಿಯ ಹೊಂದದೆ ವ್ಯರ್ಥ

ಮಾತುಗಳಾಡಲ್ಯಾಕೆ - ಹೇ ಜಿಹ್ವೆ ||ಅನುಪಲ್ಲವಿ||


ಜಲಜನಾಭನ ನಾಮವು ಈ ಜಗಕ್ಕೆಲ್ಲ

ಜನನ ಮರಣಹರವು

ಸುಲಭವಾಗಿಹುದು ಸುಖಕೆ ಕಾರಣವಿದು

ಬಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು

ತಿಳಿದು ತಿಳಿಯದಿಹರೇ - ಹೇ ಜಿಹ್ವೆ ||೧||


ತರಳೆ ದ್ರೌಪದಿಯ ಸೀರೆ ಸೆಳೆಯುತಿರೆ

ಹರಿ ನೀನೆ ಗತಿಯೆನಲು

ಪರಮ ಪುರುಷ ಭವಭಂಜನ ಕೇಶವ

ದುರುಳರ ಮರ್ದಿಸಿ ತರುಣಿಗೆ ವರವಿತ್ತ

ಹರಿನಾಮ ಪ್ರಿಯವಲ್ಲವೇ - ಹೇ ಜಿಹ್ವೆ||೨||


ಹೇಮ ಕಶ್ಯಪ ಸಂಭವ ಈ ಜಗಕ್ಕೆಲ್ಲ

ನಾಮವೇ ಗತಿಯೆನಲು

ಪ್ರೇಮದಿಂದಲಿ ಬಂದು ಕಾಮಿತಾರ್ಥಗಳಿತ್ತ

ಸ್ವಾಮಿ ಹಯವದನನ ನಾಮವ ನೆನೆಯುತ್ತ

ಯಾಮ ಯಮಕೆ ಬಿಡದೆ - ಹೇ ಜಿಹ್ವೆ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು