|| ಆರತಿ ಹಾಡು ||
ಪಂಕಜ ಮುಖಿಯರೆಲ್ಲರು ಬಂದು
ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ ||
ಮತ್ಸ್ಯಾವತಾರಗೆ ಮಂದರೋದ್ಧಾರಗೆ
ಅಚ್ಚರಿಯಿಂದ ಭೂಮಿ ತಂದವಗೆ ||
ಹೆಚ್ಚಾದ ಉಕ್ಕಿನ ಕಂಭದಿಂದ ಬಂದ
ಲಕ್ಷ್ಮೀ ನರಸಿಂಹಗಾರತಿ ಎತ್ತಿರೆ ||೧ ||
ವಾಮನ ರೂಪಲಿ ದಾನ ಬೇಡಿದವಗೆ
ಪ್ರೇಮದಿ ಕೊಡಲಿಯ ಪಿಡಿದವಗೆ ||
ರಾಮಚಂದ್ರನಾಗಿ ದಶ ಶಿರನನು ಕೊಂದ
ಸ್ವಾಮಿ ಶ್ರೀ ಕೃಷ್ಣಗಾರತಿ ಎತ್ತಿರೆ ||೨||
ಬತ್ತಲೆ ನಿಂತಗೆ ಬೌದ್ಧಾವತಾರಗೆ
ಉತ್ತಮ ಅಶ್ವನೇರಿದಗೆ ||
ಭಕ್ತರ ಸಲಹುವ ಪುರಂದರ ವಿಠ್ಠಲಗೆ
ಮುತ್ತೈದೆಯರಾರತಿ ಎತ್ತಿರೆ || ೩ ||
0 ಕಾಮೆಂಟ್‌ಗಳು