|| ಪಾಂಡುರಂಗ ವಿಠಲ ಸ್ತುತಿ ||
ನಾ ಡೊಂಕಾದರೇನು ನಿನ್ನ ನಾಮ ಡೊಂಕೆ ವಿಠಲ
ನಾ ಡೊಂಕಾದರೇನು ನಿನ್ನ ನಾಮ ಡೊಂಕೆ ವಿಠಲ
ನದಿಯು ಡೊಂಕಾದರೇನು ಉದಕ ಡೊಂಕೆ ವಿಠ್ಠಲ
ಕಬ್ಬು ಡೊಂಕಾದರೇನು ಸಿಹಿಯು ಡೊಂಕೆ ವಿಠ್ಠಲ |1
ಪುಷ್ಪ ಡೊಂಕಾದರೇನು ಗಂಧ ಡೊಂಕೆ ವಿಠಲ
ಆಕಳು ಡೊಂಕಾದರೇನು ಹಾಲು ಡೊಂಕೆ ವಿಠ್ಠಲ
ಬಿಲ್ಲು ಡೊಂಕಾದರೇನು ಬಾಣ ಡೊಂಕೆ ವಿಠ್ಠಲ|2|
ನಾನು ಹೊಲೆಯನಾದರೇನು ನಿನ್ನ ನಾಮ ಹೊಲೆಯೆ ವಿಠ್ಠಲ
ಅಜ್ಯನಾದರೇನು ಕಾಯೋ ಸುಜ್ಯ ಪುರಂದರ ವಿಠ್ಠಲ|3|
0 ಕಾಮೆಂಟ್‌ಗಳು