ಒಂದು ಪ್ರಾರ್ಥಿಸಲು ನೂರೊಂದು ಕೊಟ್ಟೆಯೋ - Ondu Prarthisalu Noorondu Kotteyo

|| ಹರಿ ಸ್ತುತಿ ||




ಒಂದು ಪ್ರಾರ್ಥಿಸಲು ನೂರೊಂದು ಕೊಟ್ಟೆಯೋ 

ದೇವ ತಂದೆ ನಿನ್ನ ಕರುಣವೆಂದೆಂದಿಗೂ ಇರಲಿ ||ಪ||


ಇಂದು ನೀನಿತ್ತ ನೂರೊಂದು ನಿನ್ನಯ ಪಾದ |

ದ್ವಂದ್ವಗರ್ಪಿಸುವೆ ನಿನ್ನಯ ಸೇವೆ ಎಂದೆನುತ ||ಅ.ಪ||


ನಿನ್ನ ಮೂರ್ತಿಯ ನೋಡಿ ನಿನ್ನ ಸ್ತುತಿಯನೆ ಮಾಡಿ

ನಿನ್ನ ಕರದಲಿ ಪಿಡಿದು ಪುಣ್ಯಗಳಿಸಿದೆನೋ

ನಿನ್ನ ಸುಂದರ ರೂಪ ಸತತ ಹೃದಯದಿ ಪೊತ್ತು

ಧನ್ಯನಾಗಿರುವೆನಿನ್ನೇನು ಬೇಕಿಹುದೆನಗೆ ||೧||


ನಿಟ್ಟುಸಿರು ಬಿಡಿಸಿದೆಯೋ ಹೊಟ್ಟೆಯನು ಸುಡಿಸಿದೆಯೋ

ಕಟ್ಟಕಡೆಯಲಿ ಕರವನೆತ್ತಿ ಮೇಲೆತ್ತಿದೆಯೋ

ಕಟ್ಟುಬಣ್ಣವಿದಲ್ಲ ಸುಟ್ಟರಿದು ಪೋಗದು

ಘಟ್ಟಿಯಾಯಿತು ಎನ್ನ ಪ್ರೇಮ ನಿನ್ನೊಳಗೆ ||೨||


ಕೆಸರಿನಲ್ಲಿ ಕಂಬದಂತಿದ್ದ ಎನ್ನಯ ಸ್ಥಿತಿಯು

ಕುಸಿಯಲಿಲ್ಲವೋ ದೇವ ಶಶಿಕುಲ ಪ್ರಸನ್ನ

ಹೊಸತಾದ ಚೈತನ್ಯ ಎನಗೆ ವಿಕಸಿತವಾಯ್ತು

ಉಸಿರಿರುವ ತನಕ ನಾ ಮರೆವುದಿಲ್ಲವೋ ನಿನ್ನ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು