ಬಂದು ನಿಂದಾ ಕಣ್ಣ ಮುಂದೆ - Bandhu Ninda Kanna Munde

|| ಕೃಷ್ಣ ಭಜನೆ ||



ಬಂದು ನಿಂದಾ | ಕಣ್ಣ ಮುಂದೆ | ಬಂದು ನಿಂದಾ

ಬಂದು ನಿಂದಾ ಭಾಗವತರ ಪ್ರಿಯಾ |

ಕಂದರ್ಪ ಜನಕ ಶ್ರೀ ಕರುಣಾಸಾಗರ ಮೂರ್ತಿ


ಕುಟಿಲ ಕುಂತಲ ದೇವ | ವಟು ವೇಷದಿಂದಲಿ ||

ನಟನೆ ಮಾಡುತ ದಿವ್ಯ | ಪಟುತರದಲಿ ತಾನು ||1||


ಮುರಳಿನೂದುತ್ತ | ಮರುಳುಗೊಳಿಸಿ ಜನರ ||

ಕೊರಳ ಪದಕಹಾರ | ಧರಿಸಿ ತಾ ನಲಿಯುತ ||2||


ಸುಜನರ ಪೊರೆಯುವ | ಕುಜನರ ತರಿಯುವ |

ವಿಜಯ ಸಾರಥಿ ದಿವ್ಯ | ವಿಜಯವಿಠಲರೇಯಾ ||3||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು