ಸ್ವಾಮಿ ನೀನೆ ಸಾರ್ವಭೌಮ ಶ್ರೀರಘುರಾಮ - Swami Neene Sarvbhauma Sri Raghurama

||ರಾಮ ಭಜನೆ||

 ರಚನೆ : ಶ್ರೀ ಮಹಿಪತಿ ದಾಸರು




ಸ್ವಾಮಿ ನೀನೆ ಸಾರ್ವಭೌಮ ಶ್ರೀರಘುರಾಮ

ಸೋಮಶೇಖರಪ್ರಿಯ ದಿವ್ಯ ನಿನ್ನ ನಾಮ ||ಪ||


ಕಾಕುಸ್ಥತಿಲಕ ಕಾರುಣ್ಯನಿಧಿ ಕೃಪಾಲ

ಪ್ರಕಟ ಪ್ರಖ್ಯಾತಲಿಹ ಸತ್ಯಶೀಲ

ನಾಕಜರ ಸೆರೆಬಿಡಿಸ್ಯಾದೆ ಸಾನುಕೂಲ

ಸಕಲಸುಖವೀವ ಮೂಲೋಕಪಾಲ ||೧||


ಖರದೂಷಣಾರಿ ಶರಣಾಗತರ ಸಹಕಾರಿ

ಸರ್ವರಾಧಾರಿ ಕೋದಂಡಧಾರಿ

ದುರಿತ ದುಷ್ಕೃತ ದುರುಳ ದುಷ್ಟಜನಸಂಹಾರಿ

ವರಪೂರ್ಣವೀವ ಪರಮ ಉದಾರಿ ||೨||


ಅನುದಿನದಲಿ ನಿನ್ನ ನಡೆನುಡಿಗಳೊಂದವೆ ನೇಮ

ಅನಂತಗುಣ ಪೂರ್ಣಾನಂದ ಮಹಮಹಿಮ

ದೀನ ಮಹಿಪತಿ ಆತ್ಮಾರಾಮ ಪೂರಿತ ಕಾಮ

ಭಾನುಕೋಟಿ ತೇಜ ಘನದಯ ನಿಸ್ಸಿಮ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು