ಕುಸುಮವೊಂದನು ತಂದು ನಿನ್ನ ಚರಣಕೆ ಇರಿಸೆ - Kusumavondanu Thandu Ninna Charanake Irise

||ವೇಂಕಟಾಚಲ ಪಂಚಮಿ ಸ್ತುತಿ||

ರಚನೆ : ಅಂಬಾಸುತ




ಕುಸುಮವೊಂದನು ತಂದು ನಿನ್ನ ಚರಣಕೆ ಇರಿಸೆ

ಬಾಗಿಲಲಿ ಕಾದಿಹೆನು ಎನ್ನ ಸದ್ಗುರುವೇ...||ಪ||

ಬಾಗಿಹೆನು ಮನದಿಂದ ತನುವಿಂದ ನೋಡೆನ್ನ

ಕರುಣಿಸಿ ದರುಶನವ ನೀಡು ತಂದೆ....||ಅ.ಪ||


ನಿತ್ಯ ಕಾಯಕವಿದುವೆ ಸತ್ಯ ಮೂರುತಿ ನಿನ್ನ

ಚಿತ್ತಕಾಹ್ವಾನಿಸುವ ಪರಿಯು ನೋಡೈ.... ||೧||


ಪರಿಕಿಸುವೆಯಾ ಕುಸುಮ ಪಕ್ವವೇ ಎಂದೂ

ನಿನ್ನ ದಾಸರ ಪಾದ ಧೂಳಲಿದು ಅರಳಿಹುದು...||೨||


ತಡವಾಗಲೆನ್ನ ಪೂರ್ವದ ಕರ್ಮ ಕಾರಣವೇ?

ಕಳೆಯುವವ ನೀ ತಾನೇ ಕನಿಕರಿಸದೇಕೇ? ||೩||


ಆತ್ಮಸಖನೇ ವರ ಸುಖಪುರದ ಒಡೆಯನೇ

ಅಂಬಾಸುತನ ಮೊರೆಯನ್ನಾಲಿಸೊ ನೀ ಬೇಗನೇ..||೪||


#

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು