ನೀಲವರ್ಣ ವಿಟ್ಠಲ ನಾ ನಿನ್ನ ಮೆಚ್ಚಿದೆ - Neela Varna Vittala Na Ninna Mechide

||  ಭಜನೆ ||




ನೀಲವರ್ಣ ವಿಟ್ಠಲ ನಾ ನಿನ್ನ ಮೆಚ್ಚಿದೆ ಎನ್ನ l

ಪಾಲಿಸಯ್ಯ ಪರಮ ಪಾವನ್ನ ಮೆಚ್ಚಿದೆ ll ಪ ll


ಅರವಿಂದ ಶರಧಿ ಲೋಚನಕೆ ಭಯ ನಿನ್ನ l

ವರ ನೀಲೋತ್ಪಲದೀ ವಕ್ಷದೋಳ್ ಘಾಯ l

ಸ್ಮರನ ಧಾಳಿಗೆ ಕಡು ನೊಂದೆನೊ ಪ್ರಿಯಾ ನಿನ್ನ l

ಕರುಣ ಕವಚವನ್ನು ತೊಡಿಸೊ ಜೀಯಾ ll 1 ll


ಉರದ ಮೇಲಿಡು ಪಾದ ಬಾಲರವಿಯ ನಿನ್ನ l

ತರಳ ಲೋಚನಕೆ ಮುಖೇನ್ದು ಛವಿಯ l

ಗುರುಮಾಡಿ ಸಲಹಯ್ಯ ಸಿರಿದೇವಿಯ ಎನ್ನೊಡನೆ l

ವರವ ಪಡೆವೆನು ನಿನ್ನಂಘ್ರಿ ಸೇವೆಯ ll 2 ll


ಮುನಿಜನಮನಕೆ ಸಿಲುಕದಿಪ್ಪನ ಎನ್ನ l

ಮನೆಗೆ ಬಾರೆಂಬುದುಚಿತವಲ್ಲ ನಿನ್ನ l

ಅನಿಮಿತ್ತ ಬಂಧುವೆ ನೀ ದಯಾಸಂಪನ್ನ l

ಎನ್ನಿನಿಯ ಬಾರಯ್ಯ ನೀನು ಹಯವದನ್ನ ll 3 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು