ಸುಖವೀಯೊ ಸಖರಾಯನ ನಾಮ ಸವಿಯೋ - Sukhaveeyo Sakharayana Nama Saviyo

||ವೆಂಕಟಾಚಲ ಅವಧೂತ ಭಜನೆ||

ರಚನೆ : ಅಂಬಾಸುತ



ಸುಖವೀಯೊ ಸಖರಾಯನ ನಾಮ ಸವಿಯೋ

ಅಹೋಭಾಗ್ಯವಿದು ಅವನಿತ್ತುದೇ ಅರಿಯೋ||ಪ||


ಸುಲಭಕೆ ನಾಲಿಗೆಯೊಳು ಇದು ಬಾರೋದು

ಆಂತರ್ಯದೊಳು ಅವನಿರಲು ಮಾತ್ರ ಸಾಧ್ಯವೋ||೧||


ಹೇಳಿ ಕೇಳಿ ಬಾಹೊದಲ್ಲ ಇದು ಮಂತ್ರವೋ

ಕರುಣಿಸಿ ಅವನೇ ಈವ ಉದ್ಧಾರಕ ನಿಜ ವರವೋ||೨||


ಸಪ್ತಜನ್ಮದಾಚೆಯ ಸತ್ಕರ್ಮದ ಫಲವೋ

ಸಾಧು ಸಾಧು ಸಾಧಕನಾಗಲು ಇದು ಸಾಧನವೋ||೩||


ಅವಧೂತನ ಗುರುನಾಥನ ನಾಮ ಸವಿಯೋ..

ಅಂಬಾಸುತಗೆ ಅಸುವಿತ್ತ ಅಮೃತ ನಾಮವೋ||೪||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು