ಚೆಲುವು ನೋಡಮ್ಮ ಚೆಲುವು - Cheluvu Nodamma Cheluvu

|| ಕೃಷ್ಣ ಭಜನೆ ||




ಚೆಲುವು ನೋಡಮ್ಮ ಚೆಲುವು |

ನಮ್ಮ ಉಡುಪಿ ಕೃಷ್ಣನಾ ಚೆಲುವು |

ಸುಂದರ ವದನ ಅರವಿಂದ ನಯನ |

ದೇವಕಿ ನಂದನ ಆನಂದ ಕಂದನ ||


ಒಂದು ಕೈಯಲಿ ಕಡೆಗೋಲು ಹಿಡಿದು | 

ಒಂದು ಕೈಯಲಿ ನೇಣುವ ಹಿಡಿದು |

ಬಾಲಕನಂದದಿ ನಗುತಲಿ ನಿಂತ |

ಕೌಪೀನಧಾರಿ ಕೃಷ್ಣ ಮುರಾರಿಯ ||


ಗೋಪಿಯರ ಮನಸೆಳೆದಾ ಪೋರಾ | 

ಗೋಕುಲದೆ ಹರಸಿದ ಆನಂದ ಧಾರಾ | 

ಗೋಪಾಲಕೃಷ್ಣ ನವನೀತ ಚೋರ | 

ಗೋವಿಂದ ಶ್ರೀ ಹರಿ ನಂದ ಕಿಶೋರ ||


ಅಡಗಿ ಗೋಪಿ ಚಂದನದೊಳಗೆ | 

ಪಡುವಲ ಕಡಲ ಹಡಗಲಿ ದಾಟಿ | 

ಮಧ್ವಾಚಾರ್ಯರ ಕೈಗಳ ಸೇರಿ | 

ಉಡುಪಿಯಲಿ ಮನೆ ಮಾಡಿ ನಿಂತಂಥ ಚೆಲುವು ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು