ಕರೆಯೆ ಯಶೋಧಾ ಕೃಷ್ಣನ್ ಕರೆಯೇ - Kareye Yashodha Krishnan Kareye

|| ಕೃಷ್ಣ ಸ್ತುತಿ ||




ಕರೆಯೆ ಯಶೋಧಾ ಕೃಷ್ಣನ್ ಕರೆಯೇ

ನರಹರಿಯೆ ನಂದ ಗೋಪನ ಮರಿಯೆ

ಮಾತಿಲಿ ಮಹಾ ದೊರೆಯೇ

ಈವನ ಗುಣ ಅರಿಯಲು

ನೋಡಲಾಶ್ಚರ್ಯವಾಗೋಧು

ನಿಮ್ಮರಮನೆಗೀತನ ||ಪ ||


ಬಾಲ ಗೋಪಾಲ ಒಳ್ಳೆ ಲೀಲೆಯಾಡುವ ನೋಡೇ

ದೊಡ್ಡ ವಿಶಾಲ ಉದರಕೆ ಬೆಣ್ಣೆ

ಪಾಲು ಕುಡಿದು ನಮ್ಮಾಲಯದೊಳು ಬಂದು

ಕಾಲಂಧಿಗೆ ಧ್ವನಿ ಆಲಿಸಿ ಕೃಷ್ಣನ ||೧||


ಕಾಂತರಿದ್ದಂಥ ಏಕಾಂತ ಸ್ಥಳಕೆ ಬಂದು ನಿಂತರಿಬ್ಬರೊಳಗೆ

ಭ್ರುಂತರ ತಿಳಿಯದೆ ಭ್ರಾಂತಳದೆ

ಎನ್ನ ಕಾಂತನೋ ಇವ ಶ್ರೀ ಕಾಂತನೋ ತಿಳಿಯದೆ||೨||


ನಂದ ನಂದನ ನಿನ್ನ ಕಂದ ಮಾಡುವುದು

ಬಾಯಿಂದ ಹೇಳಿದರೆ ಎನ್ನ

ಬಂಧುಗಳು ಭೀಮೇಶ ಕೃಷ್ಣಗೆ

ಎನ್ನ ಹೊಂದಿಸಿ ಬಿಡುವರು ಸಂದೇಹವಿಲ್ಲದೆ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು