ಪಾಡುವೆ ಶ್ರೀ ರಮಣಿ ನಿನ್ನನ್ನು - Paduve Sri Ramani Ninnanu

|| ಲಕ್ಷ್ಮಿ ಹಾಡು ||





ಪಾಡುವೆ ಶ್ರೀ ರಮಣಿ ನಿನ್ನನ್ನು

ಕೊಂಡಾಡುವೆ ಹರಿ ರಮಣಿ ಕಲ್ಯಾಣಿ||ಪ||

ಪಾಡುವೆ ನಿನ್ನನು ಜೋಡಿಸಿ ಕರಗಳ

ಮಾಡಿ ವಂದನೆ ನಾ ಬೇಡುವೆ ವರಗಳ||ಅ. ಪ.||


ಅರುಣೋದಯದಿ ಶ್ರೀ ಹರಿಪ್ರಿಯೆ ನಿನ್ನ

ಪರಮಪುರುಷ ನರಹರಿಯೊಡನೆ

ಸ್ಮರಿಸುವೆ ಪ್ರತಿದಿನ ಅರಿಶಿನ-ಕುಂಕುಮ

ಸ್ಥಿರವಾಗಿರುವ ಸೌಭಾಗ್ಯ ನೀಡೆಂದು ||೧||


ಸುರಗಂಗೆಲಿ ಮಿಂದು ವರಮಡಿಯನೆ ಉಟ್ಟು

ಹರಿದ್ರಾಕುಂಕುಮವಿಟ್ಟು ಹರುಷದಲಿ

ಗುರು ಮಂತ್ರ ಜಪಿಸಿ ಸದ್ಗುರು ಹಿರಿಯ ಸೇವೆ

ಹರುಷದಿ ಮಾಡಿಸನ್ನುತಿಗಳ ಗೈವೆ ಹರಿಯ ಪಾಡುವೆ||೨||


ಪತಿ ಸುತ ಸೇವೆಯು ಅತಿಥಿಸತ್ಕಾರವು

ಹಿತವಚನವು ಪರ ಉಪಕಾರವು

ವ್ರತ ನೇಮವು ಹರಿಕಥೆಗಳ ಮನನವು

ರತಿಪತಿಪಿತ ನಿಗರ್ಪಿಪ ಮತಿ ನೀಡೆ||೩||


ಭೋಗಿ ಕುಂತಳೆ ನಿಗಮಾಗಮ ಸನ್ನುತೆ

ಯೋಗ-ಭೋಗ ಗಳಿತ್ತು ಕಾಪಾಡೆ

ನಾಗೇಶ ಶಯನನ ಬಾಗಿ ಭಜಿಸುವಂಥ

ಭಾಗ್ಯವ ಕರುಣಿಸೆ ಭಾರ್ಗವಿ ತಾಯೆ ||೪||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು