ಮಂಗಳೆಯ ಪದಂಗಳಿಗೆರಗುವೆ - Mangaleya Padangaligeraguve

 || ಲಕ್ಷ್ಮಿ ಹಾಡು ||





ಮಂಗಳೆಯ ಪದಂಗಳಿಗೆರಗುವೆ ||ಪ||


ಸುರಾಸುರರು ಮಂದರಾಚಲ ಕಡೆಯುತ

ಸುರಸುಧೆ ಅರಸಿ ತಿರುಗುತ ಇರಲು


ಹರಿಯರಸಿ ಸುರಸಾಗರನುದರದಿ

ಸಿರಿದೇವಿ ನೀ ಧರೆಗಿರಿಸಿದಿ ಪಾದ ||೧||


ಮುನಿಸಿಕೊಂಡು ಭೃಗುಮುನಿಯ ಪರೀಕ್ಷೆಗೆ

ಇನಿಯನ ತೊರೆದು ಧರಣಿಗಿಳಿದ ಗೃಹಿಣಿ


ಘನತರತಪಕೆ ನಿಲುಕದ ಹರಿಯಾ

ಸನಿಹ ತಂದು ತೋರಿದೆ ತ್ರಿವೇಣಿ ||೨||


ಮನ್ನಿಸಿ ಸಲಹುವ ಪ್ರಪನ್ನಭಕ್ತರ

ಅಧೀನನಾದ ನಿನ್ನ ಪತಿಯಾರಾಧನಗೆ


ಸನ್ನುತ ಸುಮನಸ ನೀಡಿ ಪೊರೆಯಮ್ಮ

ಘನ್ನಮಹಿಮ ಪ್ರಸನ್ನವೆಂಕಟರಾಣಿ ನಾರೀ ಶಿರೋಮಣಿ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು