ಗಜವದನನ ಪಾದಾಂಬುಜಗಳಿಗೆರಗುವೆ - Gajavadanana Padambujagaligeraguve

|| ಶ್ರಾವಣ ಶನಿವಾರದ ಹಾಡು ||





ಗಜವದನನ ಪಾದಾಂಬುಜಗಳಿಗೆರಗುವೆ

ಅಜನರಸಿಗೆ ನಮಸ್ಕರಿಸಿ

ತ್ರಿಜಗವಂದಿತ ಲಕ್ಷ್ಮೀನಾರಾಯಣ ಸ್ವಾಮಿ

ನಿಜಪತ್ನಿ ಕತೆಯ ವರ್ಣಿಸುವೆ ||೧||


ಅರಸನಾಶ್ರಯವ ಮಾಡೊಂದು

ಪಟ್ಟಣದಲ್ಲಿ ಇರುತ್ತಿದ್ದ ಸೋಮೇಜಭಟ್ಟ

ಹರುಷದಿಂದಲಿ ಸೊಸೆಯರು ಗಂಡುಮಕ್ಕಳು

ಭರಿತವಾದರು ಸುಖದಿಂದ ||೨||


ಆ ಮಹಾಕ್ಷೀರಸಾಗರದಲ್ಲಿ ಜನಿಸಿದ

ಶ್ರೀಮಹಾಲಕ್ಷ್ಮಿದೇವಿಯರ

ನೇಮದಿಂದಿಟ್ಟು ನಿಷ್ಠೆಯಲಿ ಸೋಮೇಜಮ್ಮ

ತಾ ಮಹಾ ಸಂಭ್ರಮದಿಂದ ||೩||


ಸಾದು ಪರಿಮಳ ಅರಿಷಿಣ ಗಂಧ ಕುಂಕುಮ

ಕ್ಯಾದಿಗೆ ಕುಸುಮ ಮಲ್ಲಿಗೆಯ

ಮಾಧವನರಸಿ ಮಾಲಕ್ಷ್ಮಿಗರ್ಪಿಸಿ

ಮಂಗಳಾರತಿಯನು ಬೆಳಗುವೋರು ||೪||


ಎಸ್ಟೋರಿಗೆ ತುಪ್ಪ ಸಣ್ಣ ಶಾವಿಗೆ

ಪರಮನ್ನ ಶಾಲ್ಯಾನ್ನ ಸೂಪಗಳು

ಚೆನ್ನವಾಗಿದ್ದ ತಾಂಬೂಲನರ್ಪಿಸಿ

ಅದನ್ನುಂಡರತಿ ಹರುಷದಲಿ ||೫||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು