ಪಾಂಡುರಂಗ ತ್ವತ್ಪಾದ ಪಾಲಿಸಯ್ಯ - Panduranga Twatpaada Palisayya

|| ಪಾಂಡುರಂಗ ಭಜನೆ ||

 ರಚನೆ : ಶ್ರೀಪತಿ ವಿಠಲದಾಸರು




ಪಾಂಡುರಂಗ ತ್ವತ್ಪಾದ ಪಾಲಿಸಯ್ಯ

ಕರುಣದಿ ಪಿಡಿಕೈಯ್ಯ ||ಪ ||

ಪುಂಢರೀಕಮುನಿವರದ ನಮಿಪೆ ನಿನಗೇ

ನೀ ತ್ವರಿತದಲ್ಲೆನಗೆ||ಅ .ಪ ||


ವನಜಭವಾದಿ ಸಮಸ್ತ ಸುರವ್ರಾತಾ-

ವಂದಿತ ಶ್ರೀನಾಥಾ

ಪ್ರಣತಾರ್ಥಾಹರನೆ ಕಾಮಿತಫಲದಾತಾ-

ಮುನಿಗಣಸಂಧ್ಯಾ ತಾ

ನೆನೆವ ಜನರ ಮನದೊಳಿಹ ವಿಖ್ಯಾತಾ-

ಭುವನಾದಿನಾಥಾ

ಘನಮಹಿಮ ಒಲಿದು ಪಾಲಿಸೆನ್ನ ಮಾತಾ-

ದಯಮಾಡಿ ತ್ವರಿತಾ || ೧ ||


ಸುರಚಿರ ಮಹಿಮನೆ ಭಜಕಾಮರಧೇನೂ-

ವಸುದೇವರ ಸೂನೂ

ಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ-

ಮಾಡಿದ ಗಂಭೀರಾ

ದೊರೆಯೇ ನಿನ್ಹೊರತನ್ಯರನಾನರಿಯೇ-

ಕೇಳಲೊ ನರಹರಿಯೇ

ಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ-

ಪೊರೆಯೆಂದು ನುಡಿವೇ || ೨ ||


ಬಂದ ಜನರ ಭವಸಾಗರ ಪರಿಮಿತಿ-ತೋರಿಸುತಿಹ ರೀತೀ

ಚೆಂದದಿಂದ ಕರವಿಟ್ಟು ಕಟಿಗಳಲ್ಲಿ-ಈ ಸುಕ್ಷೇತ್ರದಲೀ

ನಿಂದಿಹ ಭೀಮಾತೀರ ಚಂದ್ರಭಾಗಾದಲ್ಲಿಯ ವೈಭೋಗಾ

ತಂದೆ ಶ್ರೀಪತಿ ವಿಠ್ಠಲ ಸುಖಸಿಂಧೋ-ಅನಾಥ ಬಂಧೋ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು