ಸದ್ಗುರು ಸೇವೆಯ ಮಾಡಮ್ಮಾ - Sadguru Seveya Madamma

|| ಗುರು ಸ್ತುತಿ ||

ರಚನೆ : ಶ್ರೀ ಸದ್ಗುರು ಸತ್ ಉಪಾಸಿ ಮಹಾರಾಜರು




ಸದ್ಗುರು ಸೇವೆಯ ಮಾಡಮ್ಮಾ |

ಬೇಗನೆ ಶಿವಪದ ಸೇರಮಾ ।

ದೈವವ ನಂಬಿರಬೇಕಮ್ಮಾ |

ಗುರುದೇವನೆ ಶಿವನೆಂದರಿಯಮ್ಮಾ || ಪ||


ಗುರುವನು ಪರಿಕಿಸಬೇಡಮ್ಮಾ |

ನಿಸ್ಸಂಶಯದಿಂದಿರು ತಂಗ್ಯಮ್ಮಾ |

ಸಂಕಲ್ಪಗಳಳಿದಿರಬೇಕಮ್ಮಾ |

ಗುರು ಪಾದವ ನಂಬಿರಬೇಕಮ್ಮಾ || ೧||


ಗುರುವು ಶಿಷ್ಯಗೆ ಭೇದಿಲ್ಲಮ್ಮಾ |

ಅರಿತರೆ ನೀನೆ ಗುರುವಮ್ಮಾ |

ಗು-ಕಾರವೆ ಗುಣಾತೀತಮ್ಮಾ |

ರು-ಕಾರವೆ ರೂಪಾತೀತಮ್ಮಾ || ೨ ||


ಆಸನ ಹಾಕಿರಬೇಕಮ್ಮಾ |

ವ್ಯಸನವ ನೂಕಿರು ತಂಗ್ಯಮ್ಮಾ |

ಯೋಗವ ಸಾಧಿಸಿ ನೋಡಮ್ಮಾ

ಭೋಗದೊಳಾಸೆಯ ನೀಗಮ್ಮಾ ||೩||


ನನಗೇಳಿದೆಯೆಂದು ತಿಳಿಯಮ್ಮಾ |

ಮತ್ತೊಬ್ಬರಿಗಲ್ಲಿದು ತಂಗ್ಯಮ್ಮಾ |

ಇದನರಿತುಕೊಂಡರೆ ಭಾಗ್ಯವಂತಮ್ಮಾ |

ಮರೆತೆಯಾದರೆ ಯಮನೊಶವಮ್ಮಾ ||೪||


ಹಿರಿತನವೆಂದಿಗೂ ಬೇಡಮ್ಮಾ |

ಕಿರಿಯವಳಾಗಿರು ತಂಗ್ಯಮ್ಮಾ |

ಅನುಭವದ್ದಿರಿಯವಳಾಗಮ್ಮಾ |

ಗುರುವು ಕನ್ನೇಶನ ಕೂಡಮ್ಮಾ || ೫||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು