|| ವೆಂಕಟರಮಣ ಮಂಗಳ ಸ್ತುತಿ ||
ತಿರುಪತಿ ವೆಂಕಟರಮಣನ ರೂಪಿನಲಿ ಕಂಗೊಳಿಸುವ
ನಗುಮೊಗದರಸ ಉಡುಪಿ ಶ್ರೀಕೃಷ್ಣನಿಗೆ
ಜಯಮಂಗಳಂ ನಿತ್ಯ ಶುಭಮಂಗಳಂ |
ಜಗದೇಕ ವೀರನಿಗೆ ಜಗದುದರ ದೇವನಿಗೆ
ಜಗವ ಬಾಯೊಳು ತೋರ್ದಮಹಾಮಹಿಮಗೆ
ಜಗವ ಸೃಜಿಸಿದ ಹರಿಗೆ ಜಗವಪಾಲಿಪದೊರೆಗೆ
ಜಗವ ಸಂಹರಿಸುವಗೆ ಜಯ ಮಂಗಳಂ ||
ವರಮುನಿಯ ತಾಡನದಿ ಹೊರಡೆ ಲಕ್ಷ್ಮಿಯು
ಆಗ ಗಿರಿಗಿಳಿದು ಬಂದು ಹುತ್ತದೊಳಗಿರಲು
ಪರಮೇಷ್ಠಿ ಅರಸಿಪಾಲ್ಗರಿಯೆಗೋಪಾಲಕನ
ವರಕುಠಾರದ ಪೆಟ್ಟಿಗಂಜಿ ನಟಿಸಿದವಗೆ ಜಯಮಂಗಳಂ ||1||
ಗಿರಿಗಿರಿಯ ಸಂಚರಿಸಿ ಅಡವಿಮೃಗ ಬೆನ್ನಟ್ಟಿ
ಪರಮಪದ್ಮಾವತಿಯ ಮನದಿ ಕಂಡು
ದುರುಳ ಮಾತುಗಳಾಡಿ ಶಿಲೆಯತಾಡಿತನಾಗಿ
ಕೊರವಂಜಿ ರೂಪದಿಂ ಕಣಿಯ ಹೇಳಿದಗೆ ಜಯಮಂಗಳಂ
||2||
ಆಕಾಶರಾಜನಿಗೆ ಅಳಿಯನೆನಸಿಕೊಂಡು
ಆಕೆ ಪದ್ಮಾವತಿಯ ಕೂಡಿದವಗೆ
ಬೇಕಾದ ವರಗಳನು ಕೊಡುತ ಭಕ್ತರ ಪೊರೆವ ಶ್ರೀಕಾಂತ
ಕಮಲನಾಭವಿಠ್ಠಲಗೆ ಜಯಮಂಗಳಂ||3||
0 ಕಾಮೆಂಟ್‌ಗಳು