ಕೃಷ್ಣಬಾರೋ ಕೃಷ್ಣಬಾರೋ - Krishna Baaro Krishna Baaro

|| ಕೃಷ್ಣ ಸ್ತುತಿ ||

ರಚನೆ : ಪುರಂದರದಾಸರು




ಕೃಷ್ಣಬಾರೋ ಕೃಷ್ಣಬಾರೋ

ಕೃಷ್ಣಯ್ಯ ನೀ ಬಾರೆಯ್ಯ ||ಪ||

ಸಣ್ಣ ಹೆಜ್ಜೆಯ ನಿಟ್ಟು ಗೆಜ್ಜೆನಾದಗಳಿಂದಾ ||ಅ. ಪ||


ಸುರುಳು ಕೇಶಗಳ ಅಲೆಯುವ ಅಂದ|

ಭರತ ಕಸ್ತೂರಿ ತಿಲಕವೆ ಚಂದಾ|

ಶಿರದಿ ಒಪ್ಪುವ ನವಿಲು ಕಂಗಳಿಂದಾ |

ತರತರಾ ಆಭರಣವಾ ಧರಿಸಿ ನೀ ಬಾರೆಯ್ಯಾ ||೧||


ಮನ್ಮಥ ಜನಕನೆ ಬೇಗನೆ ಬಾರೋ|

ಕಮಲಾಪತಿ ನೀ ಬಾರೋ|

ಅಮಿತ ಪರಾಕ್ರಮ ಶಂಕರ ಬಾರೋ|

ಕಮನೀಯ ಗಾತ್ರನೇ ಬಾರಯ್ಯ ದೊರೆಯೇ ||೨||


ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ

ಮೇಲಾದ ಭಕ್ಷಗಳ ಮುಚ್ಚಿಟ್ಟು ತರುವೆ ||

ಜಾಲ ಮಾರ್ಗದಲಿ ಬಾರಯ್ಯ ದೊರೆಯೆ| 

ಬಾಲ ಎನ್ನ ತಂದೆ ಪುರಂದರ ವಿಠಲ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು