ಬಜಬೆಣ್ಣೆ ಇಡುವೆನು ಬಾರೋ ರಂಗ - Bajabenne Iduvenu Baaro Ranga

|| ರಂಗ ಸ್ತುತಿ ||




ಬಜಬೆಣ್ಣೆ ಇಡುವೆನು ಬಾರೋ ರಂಗ

ನಿಜರೂಪ ತೋರೆನಗೆ|

ಭಜನೆಯ ಮಾಡಿ ನೀ ಬೇಡುವೆ ರಂಗ ||ಅ. ಪ.||


ಗೋಕುಲಿಕೆ ಪೋಗಿ ಗೋಕ್ಷೀರವನೆ ತಂದು|

ಗೋವಿಂದನಾ ಸ್ಮರಣೆ ಮಾಡುವೆನಾ ರಂಗಾ ||೧||


ಹಸಿ ಅರಳವಲಕ್ಕಿ ಹೊರ ಬೆಣ್ಣೆ ಕ್ಷೀರವು|

ಮೊಸರಾ ಮೇಲಿನ ಕೆನೆ ನೀಡುವೆ ರಂಗ ||೨||


ನಾರಿಯರೆಲ್ಲಾ ಬಂದು ನವನೀತವನ್ನೆ ತಂದು|

ನಾರಾಯಣ ಸ್ತುತಿ ಮಾಡುತ ರಂಗ ||೩|| 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು