ಕೃಷ್ಣ ಕೃಷ್ಣ ಹರೇ ಕೃಷ್ಣ ಕೃಷ್ಣ - Krishna Krishna Hare Krishna Krishna

|| ಶ್ರೀ ಕೃಷ್ಣ ಸ್ತುತಿ ||



ಕೃಷ್ಣ ಕೃಷ್ಣ ಹರೇ ಕೃಷ್ಣ ಕೃಷ್ಣ

ಬಂದ ಕೃಷ್ಣ ಆಹಾ ಬಂದ ಕೃಷ್ಣ


ಬಂದ ಕೃಷ್ಣ ಚಂದದಿಂದ ಬಂದ ನೋಡೆ

ಗೋಪ ವೃಂದದಿ ಆನಂದಿಸುತ್ತ ಬಂದನೋಡೆ||

ಕೃಷ್ಣ ಕೃಷ್ಣ ಹರೇ ಕೃಷ್ಣ ಕೃಷ್ಣ| 


ಗೋವ ಮೇವ ನೀವ ದೇವ ಬಂದ ನೋಡೆ

ದೇವತಾ ವಾದ್ಯಗಳಿಂದ ಬಂದ ನೋಡೆ ||

ಕೃಷ್ಣ ಕೃಷ್ಣ ಹರೇ ಕೃಷ್ಣ ಕೃಷ್ಣ||


ಪಾಪ ಪೋಪ ಗೋಪ ರೂಪ ಬಂದ ನೋಡೆ

ತಾಪಲೋಪಾಲಾಪಾಟೋಪ ಬಂದ ನೋಡೆ ||

ಕೃಷ್ಣ ಕೃಷ್ಣ ಹರೇ ಕೃಷ್ಣ ಕೃಷ್ಣ||


ಆ ಸುರ ಸುಖ ಸೂಸುತ ಬಂದ ನೋಡೆ

ವಾಸುದೇವ ವಿಠಲ ತಾ ಬಂದ ನೋಡೆ ||

ಕೃಷ್ಣ ಕೃಷ್ಣ ಹರೇ ಕೃಷ್ಣ ಕೃಷ್ಣ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು