ಧ್ಯಾನವೈಭವ ದೀನ ರಕ್ಷಕ ಜ್ಞಾನದಾಯಕ ಷಣ್ಮುಖಾ - Dhyanavaibhav Deena Rakshaka Jnanadayaka Shanmukha

|| ಸುಬ್ರಹ್ಮಣ್ಯ ಸ್ತುತಿ ||




ಧ್ಯಾನವೈಭವ ದೀನ ರಕ್ಷಕ

ಜ್ಞಾನದಾಯಕ ಷಣ್ಮುಖಾ 

ಪಾಮರಾರ್ಚಿತ ಪಾದಯುಗಳ

ಫಾಲತನಯ ಷಡಾನನಾ ||೧||


ದೀನ ಪಾಲ ಕುಮಾರಧಾರ

ತೀರ ಶೋಭಿತ ಷಣ್ಣು ಕಾ

ಗಾನಲೋಲಾ ವಸಿಷ್ಠ ಭ್ರಗು

ಶುಕ ಪಾದವಂದ್ಯ ಷಡಾನನ ||೨||


ನಾಗನಾಥ ವಿಶಾಲನೇತ್ರ

ಮಹೇಶ ಪುತ್ರ ಷಣ್ಮುಖಾ

ಆಗಮಾನಕುತ ನಾರ್ತರಕ್ಷಕ

ರಾಗರಹಿತ ಷಡಾನನ ||೩||


ಧರಣಿಧರ ಶ್ರೀ ಸುರವರೇಣ್ಯ

ವರುಣ ಪೂಜಿತ ಷಣ್ಮುಖಾ

ಪರಮ ಪುರುಷ ಪಾವನಾತ್ಮ

ಕರುಣ ಪೂರ್ಣ ಷಡಾನನ ||೪||


ಅನಾದಿ ಮೂರುತಿ ಮನೋಜ್ಞ

ಕೀರ್ತಿ ದಿನಾವಿಭೂತಿಯ ಷಣ್ಮುಖ

ಉಮಾ ಮನೋಜ್ಞ ಸ್ವಾಮಿ ಪರೇಶ

ಕುಮಾರರೂಪಾ ಷಡಾನನಾ ||೫||


ವಾರಿಧೀಶ ಸುರೇಷ ವಾಸುಕಿ

ತಾರಕಾಂತಕ ಷಣ್ಮುಖಾ

ದಾರಿಣೀಶ ಪರೇಶ ಸದ್ಗುರು

ಗರುಡ ಗಮನ ಷಡಾನನ ||೬||


ಸಕಲ ದೇವ ಸಮೂಹ ಪರಿವೃತ

ವಿಶಾಲಹೃದಯ ಷಣ್ಮುಖಾ

ಅಖಿಲ ನಾಯಕ ವಿಕಸಿತೋದಯ

ಸಕಲ ಹೃದಯ ಷಡಾನನ ||೭||


ಆರಗಾಕುಲ ದೀಪ ಪ್ರಜ್ವಲ

ಶಾರದಾಕೃತ ಷಣ್ಮುಖಾ

ನಾಮಶಂಕರ ಶರ್ಮವಂದಿತ

ಭಾವರೂಪ ಷಡಾನನ ||೯||


ಮಂಗಳಂ ಶಿಖಿವಾಹ ಜಯ ಜಯ

ಮಂಗಳಂ ಶ್ರೀ ಷಣ್ಮುಖಾ

ಮಂಗಳಂ ಭವತಾರ ಜಯ

ಜಯ ಮಂಗಳಂ ಶ್ರೀ ಷಡಾನನಾ ||೧೦||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು