ಕಣ್ತುಂಬ ನೋಡೋವಾಸೆ ಶಾರದೆ - Kantumba Noduvaase Sharade

|| ಶಾರದಾ ಸ್ತುತಿ ||



ಕಣ್ತುಂಬ ನೋಡೋವಾಸೆ ಶಾರದೆ

ನಿನ್ನ ಮನ ತುಂಬಿ ಹಾಡುವಾಸೆ ಶಾರದೆ||

ಕಣ್ಣುಂಬ ನೋಡೋವಾಸೆ|ಮನ ತುಂಬಿ ಹಾಡುವಾಸೆ||

ಮನದಿಚ್ಛೆ ಪೂರೈಸು ತಾಯೇ ತಾಯೇ ।।ಪ।।


ನಲಿದು ಗೆಜ್ಜೆ ಗೆಜ್ಜೆ ಇಟ್ಟು

ನಾದರೂಪಿಣಿ ಒಲಿದು ಬಾರೆ|

ಅಖಿಲಾಂಡ ಕೋಟಿ ಬ್ರಹ್ಮಾಂಡಧರಿಸಿ|

ನಲಿದು ಬಾರಮ್ಮ ||೧||


ಶೃಂಗೇರಿಯಲಿ ನೆಲೆಸಿ ನೀನು

ಬೇಡುವ ಭಕ್ತರ ಪೊರೆಯುವಳೇ|

ವಿದ್ಯೆ ನೀಡಿ ಒಲಿದು ಬಾರೆ ನಲಿದು ಬಾರಮ್ಮ ||೨||


ವಿಶ್ವ ಖ್ಯಾತಳೆ|ವಿಶ್ವವಂದ್ಯಳೆ ಈ ಜಗದಲಿ|

ಕರುಣಾ ಮೂರ್ತಿ ಪರಮ ಜ್ಞಾನಿ|

ಒಲಿದು ಬಾರಮ್ಮ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು