ಮುದ್ದೂ ಮಹಾಲಕ್ಷ್ಮಿಗೆ ಮುತ್ತೀನಾರತಿ ಬೆಳಗಿ - Muddu Mahalakshmige Muttinarathi Belagi

|| ಲಕ್ಷ್ಮಿ ಆರತಿ ಹಾಡು ||




ಮುದ್ದೂ ಮಹಾಲಕ್ಷ್ಮಿಗೆ ಮುತ್ತೀನಾರತಿ ಬೆಳಗಿ

ಶ್ರೀವಿಜಯಲಕ್ಷ್ಮಿಗೆ ಜಯ ಮಂಗಳಾ

ಜಯ ಮಂಗಳಾ ನಿತ್ಯ ಶುಭ ಮಂಗಳ||ಪಲ್ಲವಿ||


ಭಾಗ್ಯಾದ ಲಕ್ಷ್ಮಿ ಯ ಬಾ ಎಂದು ಕರೆದು

ಧಾನ್ಯದ ಲಕ್ಷ್ಮಿಯ ಧೈರ್ಯದಿಂ ಕುಳ್ಳಿರಿಸಿ

ಶ್ರೀ ಧನಲಕ್ಷ್ಮಿಗೆ ಶೃಂಗಾರವನು ಮಾಡಿ

ಶ್ರೀ ರಮಣ ಸಹಿತ ವರಗಳನ್ನು ಬೇಡಿ||೧||


ಸಂತಾನ ಲಕ್ಷ್ಮಿಗೆ ಸಂಪೀ ಹೂವಿನ ಹಾರ

ಸೌಭಾಗ್ಯಲಕ್ಷ್ಮಿಗೆ ಸಣ್ಣ ಜಾಜಿಯ ಮುಡಿಸಿ ಸಂಪತ್ತು

ಲಕ್ಷ್ಮಿಗೆ ಸರ್ವ ಉಪಚಾರವ ಮಾಡಿ

ಐಶ್ವರ್ಯ ಲಕ್ಷ್ಮಿಯ ಆಶೀರ್ವಾದವ ಪಡೆದು||೨||


ಅಷ್ಟಲಕ್ಷ್ಮಿಯ ಪೂಜೆ ಭಕ್ತಿಯಿಂದ ಮಾಡಿದರೆ

ಕಷ್ಟಗಳು ಪರಿಹಾರ ಇಷ್ಟಾರ್ಥ ಸಿದ್ಧಿಯು

ಕಪಿಲಾ ನಾಮಕ ವರ ಮಹಾ

ಕರುಣಾದಿಂದಲಿ ಎಮ್ಮನು ಪೊರೆವಳು||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು