ಪಾಲಿಸಮ್ಮ ಮುದ್ದು ಪಾರ್ವತಿ - Palisamma Muddu Parvathi

|| ಪಾರ್ವತಿ ಸ್ತುತಿ ||



ಪಾಲಿಸಮ್ಮ ಮುದ್ದು ಪಾರ್ವತಿ |

ಪರಿಪಾಲಿಸೆಮ್ಮ ಶಿವಶಂಕರೀ |

ಪಾಲಿಸು ಸ್ವರ್ಣಗೌರಿ ಪಾಲಿಸು ಮಂಗಳಗೌರಿ |

ಪಾಲಿಸು ಸಿರಿಗೌರಿ ಪಾಲಿಸು ಚೈತ್ರಗೌರಿ ||೧||


ಶಿವನ ಪಟ್ಟದ ರಾಣಿ ಮನದ ಅಭಿಮಾನಿ |

ಶಿವ ಕಾಮ ಸುಂದರಿ ಅರ್ಧನಾರೀಶ್ವರಿ |

ಪಾಂಡ್ಯ ಭೂಪಾಲ ಪುತ್ರಿ ಪರ್ವತ ರಾಜಕುಮಾರಿ |

ಪಾರ್ವತಿ ದಿವಸಿ ಗೌರಿ ತ್ರಿಪುರ ಸುಂದರಿ ಮಾತೆ ||೨||


ಕಂಚಿ ಕಾಮಾಕ್ಷಿ ಮಧುರೆ ಮೀನಾಕ್ಷಿ |

ಕಾಶಿ ವಿಶಾಲಾಕ್ಷಿ, ಕಾತ್ಯಾಯಿನಿಗೌರಿ |

ನೀಲಕಂಠನ ರಾಣಿ ನಿಗಮಗೋಚರವಾಣಿ |

ನಿತ್ಯ ಕಲ್ಯಾಣಿ ದೀನರಕ್ಷಣಿ ಗೌರಿ ||೩||


ರಾಜರಾಜೇಶ್ವರಿ ಲಲಿತಾಂಬೆ ಭ್ರಮರಾಂಬೆ |

ಕಾಳಿ ಭವಾನಿ ಕನ್ಯಾಕುಮಾರಿ |

ಅಖಿಲಾಂಡೇಶ್ವರಿ ಉಮಾ ಮಹೇಶ್ವರಿ |

ಅನ್ನಪೂರ್ಣೆ ಮಾತೆ ಸರ್ವಮಂಗಳ ದೇವಿ ||೪||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು