ಪೂಜೆ ಮಾಡೋಣ ಬನ್ನಿರೇ - Pooje Madona Bannire

|| ಗೌರಿ ಹಾಡು ||




ಪೂಜೆ ಮಾಡೋಣ ಬನ್ನಿರೇ|ಗೌರಮ್ಮನ|

ಪೂಜೆ ಮಾಡೋಣ ಬನ್ನಿರೇ ||ಪ||


ಪೂಜೆ ಮಾಡೋಣ ಬನ್ನಿ ಮೂಜರ್ಗ ಜನನಿಯ |

ರಾಜರಾಜೇಶ್ವರಿ ಎನಿಸೋ ಗೌರಮ್ಮನ ||ಅ, ಪ,||


ಊರು ಶೃಂಗಾರವಾಗಲೀ| ಗೌರಮ್ಮಂಗೆ|

ತೋರಣಂಗಳ ಕಟ್ಟಲೀ|

ಭಾಮೆ ಗೌರಮ್ಮನು ಬರುವ ಸಮಯದಲ್ಲಿ|

ಕಾಯಿ ಒಡೆದು ಕದಲಾರತಿ ಮಾಡಿರೆ ||೧||


ಸಾಲು ದೀಪಗಳ ಹಚ್ಚಿ ನಾರಿಯರೆಲ್ಲಾ|

ಗಂಧದ ಕಡ್ಡಿ ಹಚ್ಚಿ |

ಮೇಲು ತುಪ್ಪದ ದೀಪ ಧೂಪಾರತಿ ಮಾಡಿ|

ಗಂಗೆಯ ಸಹಿತಲಿ ಅಲಂಕಾರ ಮಾಡುತಾ ||೨||


ಗಂಧಾಕ್ಷತೆ ಪುಷ್ಪವು | ಗೆಜ್ಜೆ ವಸ್ತ್ರ| 

ಚಂದದ ಅರಸಿನ ಕುಂಕುಮ ಚಂದ್ರ |

ಅಂದದಿ ಕರಿಮಣಿ ಬಳೆ ಬಿಚ್ಚೋಲೆ ಇಟ್ಟು |

ಮಂದಾರ ಮಲ್ಲಿಗೆ ಹಾರವನ್ ಹಾಕುತ್ತ ||೩||


ಚ್ಚಿತ್ರಾನ್ನ ಮಧುರಾನ್ನವೂ | ಕಲಸಿದ ಅನ್ನ |

ನಾನಾ ಬಗೆಯ ಭಕ್ಷವೂ |

ಕತ್ತರಿಸಿದ ಅಡಕೆ ಬಿಳಿ ಎಲೆ ಯಾಲಕ್ಕಿ |

ಕಸ್ತೂರಿ ಬೆರೆಸಿದ ಮುತ್ತಿನ ಸುಣ್ಣವನ್ನಿಟ್ಟು ||೪||


ಶಾಲ್ಯಾನ್ನ ಭಕ್ಷವೂ | ಶುದ್ಧೋದಕ |

ಆಚಮನ್ಯವ ಮಾಡಿ |

ಸಾಸಿರ ನಾಮವ ಪಾಡಿ ಮಂಗಳಾರತಿ ಎತ್ತಿ |

ವರಗಳ ಬೇಡುವೆ ಸ್ವರ್ಣ ಗೌರಿಯ ನಾ ||೫||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು