|| ಲಲಿತಾ ಸ್ತುತಿ ||
ರಾಗ : ಬೇಹಾಗ್
ತಾಳ ಆದಿತಾಳ
ಶ್ರೀಚಕ್ರ ವಾಸಿನಿ ಶ್ರೀ ಲಲಿತೆ ಸರ್ವಾಲಂಕೃತೆ
ಸರ್ವ ಶಕ್ತಿ ಭೂಷಿತೆ
ಶ್ರೀ ಚಕ್ರವಾಸಿನಿಶ್ರೀ ಲಲಿತ ||ಪ||
ನವಶಕ್ತಿ ರೂಪಿಣಿ ಚಿಂತಾಮಣಿ ನವರತ್ನ
ಭೂಷಿಣಿನವ ದ್ವೀಪ ವಾಸಿನಿ ||೧||
ಆನಂದ ನಿಲಯೆ ಅಕ್ಷಯ ವರದೆ
ಆರ್ಜಿತ ದಾಯಿನಿ ಆದಿಶಕ್ತಿರೂಪಿಣಿ ||೨||
ಬೃಹದೀಶ್ವರಿ ದೇವಿ ಭುವನೇಶ್ವರಿ
ಜಗದಂಬ ಶಾರದ ರಾಜರಾಜೇಶ್ವರಿ ||೩||
ನಿಷ್ಕಾಮ ರೂಪಿಣಿ ನಿರುಪಪ್ಲವೇ
ನೀರಜಾಕ್ಷಿ ಅಂಬೆ ನೀಲಾಂಬರಿ ||೪||
ಮಂತ್ರ ನಿವಾಸಿನಿ ಮೃದು ಹಾಸಿನಿ
ಮಂದಾರ ಪೂಜಿತೆ ಮಾತೃಸ್ವ ರೂಪಿಣಿ ||೫||
ನವರತ್ನ ಪೀಠ ರಾರಜಿತೆ
ರತ್ನಮಾಲ ರೂಪಿಣಿ ಶ್ರೀ ಲಲಿತೆ ||೬||
0 ಕಾಮೆಂಟ್‌ಗಳು