|| ಲಕ್ಷ್ಮಿ ಸ್ತುತಿ ||
ಲಕ್ಷ್ಮೀ ನೀ ಬಾರಮ್ಮ ಮನೆಗೆ
ಬಾರಮ್ಮ ಮನೆಗೆ ನೀ ಭಾಗ್ಯದ ಲಕ್ಷ್ಮೀಯೇ
ತೋರಮ್ಮ ನಿನ್ನ ದಯ ತೋರಿಸು ತಾಯೇ ||ಪ||
ಕಾಲಲಂದಿಗೆ ಗೆಜ್ಜೆ ಘಲು ಘಲು ಘಲುಕೆಂದು
ನೀಲವರ್ಣನ ಕೂಡ ನಲಿದಾಡು ತಾಯೇ ||೧||
ಸಕ್ಕರ ತುಪ್ಪದ ಕಾಲುವೆ ಹರಿಸುತ
ಶುಕ್ರವಾರದ ಪೂಜೆ ಬಾರಮ್ಮ ಮನೆಗೆ ||೨||
ವೆಂಕಟ ವಿಠಲನ ಬಿಂಕದ ರಾಣಿಯೇ
ಪಂಕಜೋದ್ಭವಳೆ ನೀ ಬಾರಮ್ಮ ಮನೆಗೆ ||೩||

0 ಕಾಮೆಂಟ್‌ಗಳು