ಅಂಬಾಗಾರುತಿಯನ್ನು ರಂಭೇರು ಬೆಳಗಿರೆ - Ambagaruthiyannu Rambheru Belagire

|| ಅಂಬಾ ಆರತಿ ಹಾಡು ||




ಅಂಬಾಗಾರುತಿಯನ್ನು ರಂಭೇರು ಬೆಳಗಿರೆ

ಶುಂಬಾ ನಿಶುಂಭರ ಸಂಹಾರಿಗೆ ಶಂಕರಿಗೆ || ಪ ||


ಕುಂಬಕುಚ ಜಗದಂಬೆ ನಿನ್ನ ಪಾದ

ನಂಬಿಕೊಂಡೆನು ನರಶರೀರದಿ

ಅಂಬುಕೇಶನ ರಾಣಿ ಶರಣರ

ಬಿಂಬದೊಳು ನಲಿದಾಡು ಜನನಿಗೆ || ಆ.ಪ. ||


ಕೆಟ್ಟ ದೈತ್ಯರನೆಲ್ಲ ಮೆಟ್ಟಿ ಕುತ್ತಗಿ ಕೊಯ್ದು

ಸುಟ್ಟು ತ್ರಿಪುರಗೆದ್ದ ಶ್ರೀಕಾಂತೆಗೆ ಶಂಕರಿಗೆ

ಬ್ರಷ್ಟಮಹಿಷನ ಹೊಟ್ಟೆ ಬಗೆದು

ಬೆಟ್ಟ ಕೊಳ್ಳಕ ಇಳಿದ ರೇಣುಕಾ

ಸೃಷ್ಟಿಯೊಳು ಪಟ್ಟದ ಬ್ರಹ್ಮನ

ಶಿರವನ್ತರಿಸಿದ ಪರಮಪಾರ್ವತಿಗೆ ||1||


ಹಿಂಡ ರಕ್ಕಸರನ್ನು ಚಂಡಾಡಿ ಕೊರಳೊಳು

ರುಂಡಮಾಲೆಯ ಧರಿಸಿದ ಚಾಮುಂಡಿಗೆ ಶಾಂಭವಿಗೆ

ಮಂಡಲದೊಳ ಮೆರೆವಂಥ ಭಂಡರ

ತುಂಡುಮಾಡಿದ ಅಖಂಡ ದೇವತೆ

ಕುಂತಳೇ ಶಿಶುನಾಳಧೀಶನ

ಕಂಡೆ ನಿನ್ನಯ ಪಾದನೇತ್ರದಿ ||2||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು