ಮತ್ಸ್ಯಾವತಾರ ನೀನಾದರೆ - Mathsyaavathara Neenadare

 || ಲಕ್ಷ್ಮಿ ಹಾಡು ||



ಮತ್ಸ್ಯಾವತಾರ ನೀನಾದರೆ -

ಆಕೆ ಮತ್ಸ್ಯಗಂಗಳೆ ತಾನಾದಳೊ||

ಹೆಚ್ಚಿನ ಶಂಖವ ಹಿಡಿದರೆ - ಆಕೆ  

ನಿಚ್ಚ ಶಂಖದ ಕಂಠಳಾದಳಯ್ಯ||೧||


ನೀಲವರ್ಣ ನೀನಾದರೆ - ಆಕೆ

ನೀಲಕುಂತಳೆ ತಾನಾದಳೊ||

ಲೋಲಕಮಲನಾಭನಾದರೆ - ಆಕೆ

ಬಾಲ ಕಮಲಮುಖಿಯಾದಳಯ್ಯ||೨||


ಬೆಟ್ಟವ ನೀನೊಂದು ಪೊತ್ತರೆ -ಕುಚದ 

ಬೆಟ್ಟಗಳೆರಡುನು ತಾ ಪೊತ್ತಳೊ||

ದಿಟ್ಟ ಶೇಷನ ನೀ ತುಳಿದರೆ - ಆಕೆ

ಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ||೩||


ಗಜರಾಜ ವರದ ನೀನಾದರೆ - ಆಕೆ  

ಗಜಗಮನೆಯು ತಾನಾದಳಯ್ಯ||   

ನಿಜವಾದ ಸಿಂಹ ನೀನಾದರೆ - ಆಕೆ

ಭಜಿಸಿಸಿಂಹಮಧ್ಯೆಯಾಗಿಪ್ಪಳಯ್ಯ||೪||


ಈ ಪರಿಯಲಿ ಬಹು ಜನಿಸಿದೆ - ಭಲೆ 

ಭಾಪುರೆ ಬಾಡದೊಳ್‌ ನೆಲೆಸಿದೆ|| 

ಗೋಪಿಯರ ಮೋಹ ಸಲಿಸಿದೆ -ಚೆಲುವ 

ಶ್ರೀಪತಿ ಆದಿಕೇಶವರಾಯ ಮೆರೆದೆ||೫||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು