|| ಹರಿ ಸ್ತುತಿ ||
ಉಗಾಭೋಗ :
ನಿನ್ನನೆ ಹಾಡುವೆ ನಿನ್ನನೆ ಪಾಡುವೆ
ನಿನ್ನನೆ ಬೇಡಿ ಬೇಸರಿಸಿದೆ ರಂಗಯ್ಯ
ನಿನ್ನ ಹಾರೈಸುವೆ ನಿನ್ನ ಕಾಲನು ಪಿಡಿವೆ
ನಿನ್ನ ತೊಂಬಲಿಗೆ ನಾ ಕೈಯ್ಯನೊಡ್ಡುವೆ ಕೃಷ್ಣ
ನಿನ್ನಂಥ ಸಾಕಬಲ್ಲ ಸ್ವಾಮಿ
ಮತ್ತೆನಗುಂಟೆ ಪುರಂದರವಿಠಲರೇಯ ||
ಬೆಟ್ಟದಂಥ ದುರಿತವು ಸುತ್ತಮುತ್ತಲೊಟ್ಟಿರೆ
ಶ್ರೀಕೃಷ್ಣನಾಮ ಕಿಡಿಬಿದ್ದು, ಬೆಂದು ಹೋದದು ಕಂಡೆ
ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು
ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು
ನಿನ್ನ ಕಂಡರೆ, ಶಿರವ ಚಂಡಾಡುವನು
ಇನ್ನೊಮ್ಮೆ ಕಂಡರೆ, ಶಿಕ್ಷಿಸದೆ ಬಿಡನು
ಪುಂಡರೀಕಾಕ್ಷ ನಮ್ಮ ಪುರಂದರವಿಠಲರಾಯ
ಜಯ ಜಯಾ ಹರಿಯೆಂಬುದೆ ಸುದಿನೌ
ಜಯ ಹರಿಯೆಂಬುದೇ ತಾರಾಬಲವು
ಜಯ ಹರಿಯೆಂಬುದೆ ಚಂದ್ರಬಲವು
ಜಯ ಹರಿಯೆಂಬುದೆ ವಿದ್ಯಾಬಲವು
ಜಯ ಹರಿಯೆಂಬುದೆ ದೈವಬಲವು
ಜಯ ಹರಿ ಪುರಂದರವಿಠಲನ ಬಲವೈಯ್ಯ
0 ಕಾಮೆಂಟ್‌ಗಳು