ಮಕ್ಕಳ ಮಾಣಿಕವ ಮನೋಹರ ನಿಧಿಯೇ - Makkala Manikava Manohara Nidhiye

|| ಹರಿ ಭಜನೆ ||




ಮಕ್ಕಳ ಮಾಣಿಕವ ಮನೋಹರ ನಿಧಿಯೇ | 

ವೈರಿ | ರಕ್ತಸ ಶಕಟನ ತುಳಿದುದೀ ಪಾದವೇ ||ಪ||


ಬಲಿಯ ದಾನವಬೇಡಿ ನೆಲದೆ ಈರಡಿ ಮಾಡಿ | 

ಜಲಧಿಯ ಪಡೆದದ್ದೀ ಪಾದವೇ ಕೃಷ್ಣ || 

ಹಲವು ಕಾಲಗಳಿಂದ ಶಿಲೆಪಾಪ ಪಡೆದಿರಲು | 

ಫಲ ಕಾಲಕ್ಕೊದಗಿದ್ದು ಪಾದವೇ ಕೃಷ್ಣ ||೧|| 


ಕಡುಕೋಪ ದಿಂದ ಕಾಳಿಂಗನ ಮಡವ ಕಲುಕಿ 1 

ಹೆಡೆಯನ್ನು ತುಳಿದದ್ದೀ ಪಾದವೇ ಕೃಷ್ಣ || 

ಸಡಗರದಿ ಕೌರವನ ಸಿಂಹಾಸನವದು | 

ಹೊಡೆ ಮುಗುಚಿ ಕೆಡಹಿದ್ದೀ ಪಾದವೇ ಕೃಷ್ಣ ||೨|| 


ಶ್ರೀಂಗಾರದಿಂದಾರು ಹೆಂಗಳ ಸಹಿತ ಶ್ರೀ |

ಅಂಗನೆಯೊತ್ತುವುದೀ ಪಾದವೇ ಕೃಷ್ಣ || 

ಸಂಗ ಸುಖದಿ ಶ್ರೀ ಪುರಂದರ ವಿಠಲ 

ಅಂಗದೊಳ ಗಡಗಿದುದ್ದೀ ಪಾದವೇ ಕೃಷ್ಣ ||೩||

ಓಂ ನಮೋ ಭಗವತೇ ವಾಸುದೇವಾಯ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು