ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ - Vyarthavayitalla Janmavu Sarthakagalilla

||ಹರಿ ಭಜನೆ ||




ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ

ಅರ್ಥದಾಸೆಯಲಿ ಪೃಥ್ವಿಯೊಳಗೆ ಸುತ್ತಿ || 

ಮತ್ತನಾಗಿ ಬಲು ಕೃತ್ಯಗಳನ್ನು ಮಾಡಿ 


ಹರಿಯ ನೆನೆಯಲಿಲ್ಲ ಹರುಷದಿ ಗರುವ ಪುಟ್ಟಿತಲ್ಲ | 

ಪರಮ ಮೂಢರಲಿ ನಿರುತ ಸ೦ಗಮಾಡಿ |

ಗುರು ಹಿರಿಯರ ದೊರೆಯದೆ ಸುಮ್ಮನೆ


ಏನು ಹೇಳಲೇನು ಎನಗೆ ಹೀನ ಬಿಡದು ಮುನ್ನ | 

ಶ್ವಾನಗಿಂತ ಬಲು ಮಾನಗೆಟ್ಟು, ನಾ | 

ದೀನನಾಗಿ ನಾ ಮನ ಮನೆಗಳ ತಿರುಗಿ


ಭಾಗವತರ ಪಾದಕ್ಕೊಂದಿನ ಬಾಗಿ ನಡೆಯಲಿಲ್ಲ! 

ರಾಗರಂಗು ಭಾವ ಭಕಿಯೊಳು 

ಬಾಗಿ ಚನ್ನಕೇಶವ ನೆನೆಯದೆ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು