|| ರಾಮ ಸ್ತೋತ್ರಂ ||
ರಾಗ - ಮಧ್ಯಮಾವತಿ
ರಾಮ ಮಾಂ ಪಾಲಯ ಮುನಿ ಹೃನ್ನಿಲಯ ।
ಸುಮತಿಂ ಮೇ ಕಲಯ ।
ಭೂಮಿ-ಸುತಾಮನೋಹರ ಸದಯ ।
ಕಾಮಿತಾರ್ಥ ಜನತೋಷಿತ ನತಜಯ ।
ಸೋಮಧರಾದ್ಯರ್ಚಿತಪದ ಚಿನ್ಮಯ ॥ಪ॥
ದುಷ್ಟ-ಮರ್ದನಕೃತಾವತಾರ|ಸೃಷ್ಟಿಸ್ಥಿತಿ ಲಯಕಾರ |
ದುಷ್ಟಾಂತರಂಗ ಲೋಕೋದ್ಧಾರ
ಶಿಷ್ಟ ಜನಾರ್ತಿ ವಿನಾಶ ಬದ್ಧಾದರ ।
ವಿಷ್ಟಪಮಯ ರಘುಕುಲಾಬ್ಧಿ ಹಿಮಕರ ॥೧॥
ಮುನಿರಾಜ ಕೌಶಿಕಮಖ ಪರಿಪಾಲ|ಘನಲೀಲ ಸುಶೀಲ|
ದನುಜಾನ್ವಯ ವಿಪಿನ ದವಾಗ್ನಿಜ್ವಾಲ
ಬನಶಂಕರೀನತ ಕೃತಿನುತಿ ಲೋಲ
ಮನಸಿ ಸದಾ ವಸ ಕೃಪಾಲವಾಲ ॥೨॥
0 ಕಾಮೆಂಟ್‌ಗಳು