||ಶಂಕರ ಭಗವತ್ಪಾದರ ಭಜನೆ||
ಶಂಕರ ಶಿವ ಶಂಕರ,ಗುರು ಶಂಕರ,ಅಭಯಂಕರ॥ಪ॥
ಯೋಗಿಗಳರಸನು ಶಿವನ ಅಂಶನು ।
ಶ್ರುತಿಗಳ ಸೂರ್ಯನು ಶಂಕರ ॥೧॥
ಜನಿಸಿ ಕಾಲಟಿ ಗ್ರಾಮದಲ್ಲಿ ।
ಗುರುಗೋವಿಂದರ ಶಿಷ್ಯನಾದ ॥೨॥
ಸಾಂಖ್ಯಮತವನು ಬಿಡದೆ ಖಂಡಿಸಿ ।
ಪ್ರಕೃತಿ ಪುರುಷರ ರೂಪ ತೋರಿದ ॥೩॥
ಭಾಷ್ಯ ತ್ರಯವನು ರಚಿಸಿ ವೇದದ ।
ಅಂತರಾರ್ಥವ ತಿಳಿಯಪಡಿಸಿದ ॥೪॥
ಜಗದಿ ವೈದಿಕ ಧರ್ಮವ ಸಾರಿ |
ಜಗವು ಬ್ರಹ್ಮವೇ ಎಂದು ತೋರಿ ॥೫॥
0 ಕಾಮೆಂಟ್‌ಗಳು