|| ರಾಮ ಭಜನೆ ||
ಸೀತಾಪತೇ ರಾಮ ಸೀತಾಪತೇ ರಾಮ
ಸೀತಾಪತೇ ರಾಮ|ಸೀತಾಪತೇ ರಾಮ ಶ್ರೀರಘುರಾಮ॥ಪ ॥
ದಶರಥ ನೃಪಬಾಲ|ದಾನವ ಕುಲಕಾಲ ॥
ಧರಣಿಜಾಲೋಲ|ದಾನ ಸುಶೀಲ ॥೧॥
ಕರಧೃತಶರಚಾಪ|ಕಂದರ್ಪ ಸಮರೂಪ |
ತರಣಿ ಕುಲದೀಪ|ಕರುಣ ಪ್ರತಾಪ ॥೨॥
ರಘುಕುಲಾಂಬುಧಿಸೋಮ|ರಾಕ್ಷಸ ಕುಲಭೀಮ |
ರಣಚಂಡವಿಕ್ರಮ|ರಾಜಲಲಾಮ ॥೩॥
ಸದ್ಗುಣ ಗಣಭೂಷ|ಸರ್ವಭೂತಾವಾಸ ।
ಸಜ್ಜನಪರಿತೋಷ|ಸರ್ವಲೋಕೇಶ ॥೪॥
ವನಜ ನಿರ್ಮಿತಮಾಲ । ವಾನರ ಕುಲಪಾಲ ।|
ಕನಕಾಂಕಿತ ಚೇಲ । ಕರುಣಾಲವಾಲ ॥೫॥
ಸಾರಸ ರಸನೇತ್ರ । ಸನಕಾದಿನುತ ಪಾತ್ರ ।
ನೀರದ ನಿಭಗಾತ್ರ | ನಿರುಪಮ ಕ್ಷಾತ್ರ॥೬॥
ಶ್ರೀ ತಿರುಪತಿವಾಸ । ಶ್ರೀದಾಸ ಪರಿತೋಷ ।
ಶ್ರೀ ಸರ್ವಲೋಕೇಶ । ಶ್ರೀ ವೇಂಕಟೇಶ ॥೭॥
0 ಕಾಮೆಂಟ್‌ಗಳು