|| ಗೋವಿಂದ ಸ್ತುತಿ ||
ಅಚ್ಯುತಾನಂತ ಗೋವಿಂದ ಹರಿ
ಸಚ್ಚಿದಾನಂದ ಸ್ವರೂಪ ಮುಕುಂದ||
ರಾಮ ಗೋವಿಂದ ಸೀತಾರಾಮ ಗೋವಿಂದ
ಪನ್ನಗಶಯನ ಮುಕುಂದ ಹರೇ||
ಓದಲೇತಕೊ ಮನದಿ ವಿಜ್ಞಾನವಿಲ್ಲದ ತನಕ
ಭೇದವೇತಕೊ ಗತಿಯು ಗಮನ ತಿಳಿಯದತನಕ||
ಕದನವೇತಕೊ ಭುಜದಿ ಶಕ್ತಿಯಿಲ್ಲದ ತನಕ
ವಾದವೇತಕೊ ಶೃತಿಯ ಶಾಸ್ತ್ರ ತಿಳಿಯದ ತನಕ||
ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊ
ಹರಿಯ ಧ್ಯಾನವಿರಲು ಅನ್ಯಧ್ಯಾನವೇತಕೊ||
ಹರಿಯು ಒಲಿದ ಮನುಜನಿಗೆ ಧೈರ್ಯವಿಹುದೋ
ಸಿರಿ ಪುರಂದರ ವಿಠಲ ಇರಲು ಭಯವು ಏತಕೋ||
0 ಕಾಮೆಂಟ್‌ಗಳು