ಜಯ ಜಾನಕೀಕಾಂತ ಜಯ ಸಾಧುಜನ ವಿನುತ - Jaya Janaki Kanta Jaya Sadhu Jana Vinutha

|| ಶ್ರೀರಾಮ ಭಜನೆ ||




ಜಯ ಜಾನಕೀಕಾಂತ ಜಯ ಸಾಧುಜನ ವಿನುತ

ಜಯತು ಮಹಿಮಾನಂತ ಜಯ ಭಾಗ್ಯವಂತ ಜಯ ಜಯ


ದಶರಥನ ಮಗ ವೀರ ದಶಕಂಠ ಸಂಹಾರ

ಪಶುಪತೀಶ್ವರ ಮಿಶ್ರ ಪಾವನ ಚರಿತ್ರ 

ಕುಸುಮಬಾಣ ಸುರೂಪ ಕುಶಲಕೀರ್ತಿ ಕಲಾಪ

ಅಸಮ ಸಾಹಸ ಶಿಕ್ಷೆ ಅಂಬುಜದಳಾಕ್ಷ



ಸಾಮಗಾನಲೋಲ ಸಾಧುಜನ ಪರಿಪಾಲ

ಕಾಮಿತಾರ್ಥಪ್ರದಾತ ಕೀರ್ತಿ ಸಂಜಾತ

ಸೋಮ ಸೂರ್ಯಪ್ರಕಾಶ ಸಕಲ ಲೋಕಾಧೀಶ

ಶ್ರೀ ಮಹಾರಘುವೀರ ಸಿಂಧು ಗಂಭೀರ


ಸಕಲ ಶಾಸ್ತ್ರವಿಚಾರ ಶರಣಜನ ಮಂದಾರ

ವಿಕಸಿತಾಂಬುಜವದನ ವಿಶ್ವಮಯ ಸದನ

ಸುಕೃತ ಮೋಕ್ಷಾಧೀಶ ಸಾಕೇತ ಪುರವಾಸ

ಭಕ್ತವತ್ಸಲ ರಾಮ ಪುರಂದರವಿಠಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು