|| ಗಣಪತಿ ಹಾಡು ||
ಶರಣು ಶರಣುವಯ್ಯ ಗಣನಾಯ್ಕ
ನಿನ್ನ ಶರಣಾದಿಂದಲಿ ಕಾಯೋ ಗಣನಾಯ್ಕ |
ಎಳ್ಳುಂಡೆ ಜೇನುತುಪ್ಪ ಗಣನಾಯ್ಕ
ಎನಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ ||
ಉಸಲಿ ಕಾಯಿಕಡಬು ಗಣನಾಯ್ಕ
ನಿಮಗೆ ತಪ್ಪಾದೆ ಒಪ್ಪಿಸುವೆ ಗಣನಾಯ್ಕ |
ಗೊನೆಮೇಗ್ಲ ಬಾಳೆಹಣ್ಣು ಗಣನಾಯ್ಕ
ನಿಮಗೆ ಚಿಗುರೆಲೆ ಕಳಿ ಆಯ್ಕೆ ಗಣನಾಯ್ಕ ||
ಟೊಂಗೆಮೇಗ್ಲ ನಿಂಬೆಹಣ್ಣು ಗಣನಾಯ್ಕ
ನಿನಗೆ ಜೋಡಿ ಇಡುಗಾಯಿ ಗಣನಾಯ್ಕ |
ಕರ್ಪೂರ ಸಾಂಬ್ರಾಣಿ ಗಣನಾಯ್ಕ
ನಿಮ್ಮೆ ಮರುಗ ಮಲ್ಲಿಗೆ ಜಾಜಿ ಗಣನಾಯ್ಕ ||
ಮೂಷಿಕ ವಾಹನ ಗಣನಾಯ್ಕ
ನಮ್ಮ ಶಿವನ ಕುಮಾರನಯ್ಯ ಗಣನಾಯ್ಕ |
ಹೆಂಡ್ತಿಲ್ಲ ಮಕ್ಕಳಿಲ್ಲ ಗಣನಾಯ್ಕ
ನಮ್ಮ ಧ್ಯಾನಕ್ಕೆ ಒಲಿಯಯ್ಯ ಗಣನಾಯ್ಕ ||
0 ಕಾಮೆಂಟ್‌ಗಳು