ಪಾಲಿಸೆ ಶ್ರೀ ಗೌರೀ..ಎನ್ನನು - Palise Shree Gowri Ennanu

|| ಗೌರಿ ಹಾಡು ||

ರಾಗ ಮೋಹನ

ಆದಿತಾಳ




ಪಾಲಿಸೆ ಶ್ರೀ ಗೌರೀ..ಎನ್ನನು

ಪಾಲಿಸೆ ಶ್ರೀ ಗೌರೀ... |

ಪಾಲಿಸೆ ನಿನ್ನಯ ಪಾಲಿಗೆ ಬಂದೆನು

ಬೇಡುವೆ ಸರ್ವದಾ ಪಾದಕೆ ನಮಿಸುತ ।।


ಶರಣೆಂದವರನು ಪೊರೆವಳು ಎಂಬುವ

ಬಿರುದು ನಿನ್ನದು ಎಂದರಿತೆನು ತ್ವರದಿ |


ಸನ್ಮತ ಪುರುಷನ ಇನ್ನೆಲ್ಲಿ ಕಾಣೆನೋ

ಮನ್ಮಥನೆಂಬುವ ಬನ್ನ ಬಿಡಿಪ ಬಲು !!

ಮಹಿಮೆಯನು ನಾ ಭಕ್ತಿಯಲ್ಲಿ

ಬಣ್ಣಿಸಲಳವೆ ಪ್ರಸನ್ನ ವದನಳೆ |

ಕಾಣೆನು ಶಾಂತಿಯ ಏನೆಂದ್ದೇಳಲಿ

ಪ್ರಾಣೇಶ ವಿಠಲನು ತಾನೇ ಬಲ್ಲನು ।।

ಪ್ರಾಣೇಶ ವಿಠಲದಾಸರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು