|| ಲಕ್ಷ್ಮಿ ಸ್ತುತಿ ||
ಬಂದಾಳ್ ನೋಡೇ ಮಂದಿರದೊಳು ಭಾಗ್ಯದಲಕ್ಷ್ಮೀ |
ಭಾಗ್ಯದಲಕ್ಷ್ಮೀ ಬಂದಾಳು ನೋಡೇ ||ಪ||
ಅಂದುಗೆ ಕಿರು ಗೆಜ್ಜೆ ಘಿಲ್ ಘಿಲ್ಲೇನುತ ||ಅ.ಪ||
ಘಿಲ್ ಘಿಲ್ ಘಿಲ್ ಘಿಲ್ ಘಿಲ್ಲೇನುತಾ |
ಮುದ್ದು ಪಾದದಿ ಹೆಜ್ಜೆಯನಿಕ್ಕುತ್ತಾ ||೧||
ಎಡ ಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ |
ಬಿಡದೆ ತನ್ನ ಕರ ಕಮಲದಿ ಅಭಯ ಕೊಡುತಲಿ||೨||
ಅತಿ ಹರುಷದಿ ಹಿತದಿ ತನ್ನ ಪತಿಯ ಸಹಿತಾಗಿ |
ವಾರಿನೋಟದಿಂದ ಭಕ್ತರಿಗೆ ವರವ ಕೊಡುತಲಿ||೩||
ಸೃಷ್ಟಿಗೊಡೆಯ ತಂದೆ ಜಗನ್ನಾಥವಿಠ್ಠಲನ |
ಪಟ್ಟದರಸಿ ಅರ್ತಿಯಿಂದಲಿ ಭಕ್ತರ ಮನೆಗೆ ||೪||
0 ಕಾಮೆಂಟ್‌ಗಳು