ಶ್ರೀಹರಿ ಕಾಯೋ ಕರುಣಾನಿಧೇ - Srihari Kayo Enna Karunanidhe

|| ಶ್ರೀಹರಿ ಸ್ತುತಿ ||




ಶ್ರೀಹರಿ ಕಾಯೋ ಕರುಣಾನಿಧೇ। 

ಖಗವರಗಮನ ಕರುಣಾನಿಧೇ ||ಪ||


ಜ್ಞಾನ ಧ್ಯಾನದ ನಿಜ ಸಾಧನವರಿಯೆ| 

ನೀನೆ ಗತಿಯೆನುತ ಮಾಡುವೆ ನಮನ||೧||


ಘೋರ ಸಂಸಾರದಿ ತಾಪದಿ ನೊಂದೆ |

ವಾರಿಭವಭಯಹರ ಅಘಕುಲಶಮನ ।|೨||


ಗುರು ಮಹೀಪತಿ ಪ್ರಭು ಅನಾಥಬಂಧು |

ಚರಣ ಕಮಲಗಳಲಿರಿಸೆನ್ನ ಮನವ||೩||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು