ಏಕ ದಂತಂ ಶೂರ್ಪಕರ್ಣಂ - Ekadantam Shurpakarnam

|| ಗಣಪತಿ ಸ್ತುತಿ ||

 ರಾಗ : ಹಂಸದ್ವನಿ 




ಏಕ ದಂತಂ ಶೂರ್ಪಕರ್ಣಂ |

ವಿಘ್ನರಾಜಂ|ವಿಘ್ನೇಶ್ವರಂ । 

ವಕ್ರತುಂಡಂ |ಈಶ ಪುತ್ರಂ

ತಂ ಗಣೇಶ ಪ್ರಣಮಾಮ್ಯಹಮ್‌ ||ಪ||


ಗೌರಿತನಯ । ವಿದ್ಯಾಗಣಪತಿ । 

ಜಯಗಣೇಶ । ಗಜಾನನ ॥ 

ಶಿವಕುಮಾರ । ಪಾರ್ವತಿ ನಂದನ । 

ಸ್ಕಂದ ಸಹೋದರ | ಗಜಾನನ ||ಅ ಪ॥ 


ನಿನ್ನ ಸ್ನರಣೆಯಲಿ ಬೆಳಗಾಗುತಿದೆ 

ನಿನ್ನ ಧ್ಯಾನದಲಿ ದಿನಕಳೆಯುತಿದೆ ॥ 

ನಿನ್ನ ಗಾನದಲಿ ಮ್ಫೆ ಮರೆಯುತಿದೆ॥ 

ನಿನ್ನ ಭಜನೆಯಲಿ ಮನ ನಗುತಲಿದೆ ||೧||


ನಿನ್ನ ನಾಮದಲಿ ಎಂತಹ ಸ್ಪೂರ್ತಿ । 

ಉಲಿಯಲು ಹೆಸರನು ಎಂತಹ ಶಕ್ತಿ |

ಬಣ್ಣಿಸಲಸದಳ ನಿನ್ನಯ ಕೀರ್ತಿ | 

ವಿಘ್ನೇಶ್ವರ ನಿನ್ನ ಹರಕೆಯಲಿ ಮುಕ್ತಿ ||೨॥॥ 


ನಿನ್ನ ಸ್ಫರಿಸಲು ಕಾರ್ಯಗಳೆಲ್ಲಾ । 

ಕ್ಷಣದಲಿ ನಿಂತು ನಡೆಸುವೆ ಎಲ್ಲಾ 

ಅದರಾಗಿಸಿ ನನ್ನ ತನು ಮನ ಎಲ್ಲಾ। 

ಬಿಡಿಸಿ ಬಿಡುವೆ ಬಂಧಗಳೆಲ್ಲಾ ||೩|| 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು