|| ಗುರುದತ್ತ ಸ್ತುತಿ ||
ನಾ ನೆನೆವೆನೋ ಗುರುರಾಯನ ರಾಯನ
ನಾ ನೆನೆದೆನು ಗುರುರಾಯನ ||ಪ||
ಎನ್ನ ಜೀವನದ ಚೇತನನ ಚೇತನನ
ದಿಗಂಬರ ದಿಗಂಬರ ಶ್ರೀಪಾದ ವಲ್ಲಭ ದಿಗಂಬರ ಅ.ಪ
ಕರ್ಣಗಳಿಗಾಲಿಸೋ ಅಮೃತವಾಣಿ
ಮಸ್ತಕದ ಮೇಲಿರಿಸೋ ಕೃಪೆ
ಹೇ ಗುರುರಾಯ ಗುರುರಾಯ
ಎನ್ನ ಜೀವನದ ಚೇತನನ ಚೇತನನ ||೧||
ವಿವೇಕ ಸಿಂಧುವಿನ ಮಣಿ ಮಾಣಿಕ್ಯ
ಕರುಣಿಸಿತಾಗಲೆ ಯತ್ನ ಎನಗೆ
ಎನ್ನ ಜೀವನ ಚೇತನನ ||೨||
ಅಕ್ಷಯ ಪ್ರಾಪ್ತಿಯಾ ಕೊಡುವಾತಾ
ಕೇಶವ ಸವಿ ನುಡಿದಾತ
ಎನ್ನ ಜೀವನದ ಚೇತನನ ಚೇತನನ ||೩||
ಅಖಂಡ ಚಿಂತೆ ಹರಿಸಿ ದೈತ್ಯ ಭಯವನು ನಶಿಸಿ
ಬಾ ಗುರುರಾಯ ಗುರುರಾಯ
ಎನ್ನ ಜೀವನದ ಚೇತನನ ಚೇತನನ ||೪||
0 ಕಾಮೆಂಟ್‌ಗಳು